ನ್ಯಾಯಾಧೀಶರು ಮತ್ತು ವೈದ್ಯ ತಂಡದ ಸಮಕ್ಷಮ ಆದಿಲ್ ದೇಹದ ಪಂಚನಾಮೆ ನಡೆಸಲಾಗುವುದು: ಉಮಾ ಪ್ರಶಾಂತ್, ಎಸ್ ಪಿ

|

Updated on: May 25, 2024 | 3:06 PM

ಅವರ ಸಾವಿನ ನಂತರ ಕುಟುಂಬಸ್ಥರು ಮತ್ತು ಸಮುದಾಯದ ಮುಖಂಡರು ಠಾಣೆಗೆ ಬಂದರು ಮತ್ತು ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದ ಬಳಿಕ ಮನವರಿಕೆಯಾಗಿ ವಾಪಸ್ಸು ಹೋದರು ಎಂದರು. ಅದಾದ ಸ್ವಲ್ಪ ಹೊತ್ತಿನ ಬಳಿಕ ಉದ್ರಿಕ್ತ ಗುಂಪು ಪೊಲೀಸ್ ಠಾಣೆಗೆ ಬಂದು ದಾಂಧಲೆ ನಡೆಸಿತು. ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಒಂದಷ್ಟು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ ಪಿ ಹೇಳಿದರು.

ದಾವಣಗೆರೆ: ನಿನ್ನೆ ರಾತ್ರಿ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ (Channagiri police station) ಆದಿಲ್ (Adil) ಹೆಸರಿನ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಪ್ರತಿನಿಧಿಯೊಂದಿಎಗ ಮಾತಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ (Uma Prashanth, SP), ನಿನ್ನೆ ರಾತ್ರಿ ಸುಮಾರು 8.30 ಗಂಟೆಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆಗೆ ಕರೆತರಲಾಗಿತ್ತು ಮತ್ತು ಅಲ್ಲಿಗೆ ಹೋದ ಕೇವಲ 6-7 ನಿಮಿಷಗಳ ನಂತರ ಆದಿಲ್ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕಲಿಲ್ಲ, ಸ್ಟೇಶನ್​ನಲ್ಲಿ ನಡೆದ ವಿದ್ಯಮಾನಗಳೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅವರ ಸಾವಿನ ನಂತರ ಕುಟುಂಬಸ್ಥರು ಮತ್ತು ಸಮುದಾಯದ ಮುಖಂಡರು ಠಾಣೆಗೆ ಬಂದರು ಮತ್ತು ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದ ಬಳಿಕ ಮನವರಿಕೆಯಾಗಿ ವಾಪಸ್ಸು ಹೋದರು ಎಂದರು. ಅದಾದ ಸ್ವಲ್ಪ ಹೊತ್ತಿನ ಬಳಿಕ ಉದ್ರಿಕ್ತ ಗುಂಪು ಪೊಲೀಸ್ ಠಾಣೆಗೆ ಬಂದು ದಾಂಧಲೆ ನಡೆಸಿತು. ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಒಂದಷ್ಟು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ ಪಿ ಹೇಳಿದರು. ಮೃತ ಆದಿಲ್ ತಂದೆ ಕರೀಮುಲ್ಲಾ ಅಸಹಜ ಸಾವು ಅಂತ ದೂರು ದಾಖಲಿಸಿದ್ದಾರೆ. ನ್ಯಾಯಾಧೀಶರು ಮತ್ತು ವೈದ್ಯರ ಸಮಕ್ಷಮದಲ್ಲಿ ಶವದ ಪಂಚನಾಮೆ ನಡೆಸುವ ಪ್ರಕ್ರಿಯೆಯನ್ನು ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಮಾಡಲಾಗುವುದು ಎಂದು ಉಮಾ ಪ್ರಶಾಂತ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಗಿರಿ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವು, ಠಾಣೆಗೆ ನುಗ್ಗಿ ವಸ್ತುಗಳನ್ನ ಧ್ವಂಸಗೊಳಿಸಿದ ಸಂಬಂಧಿಕರು

Follow us on