AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರ ಜೈಲಿನಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಮೊಬೈಲ್ 1 ಲಕ್ಷ ರೂ.ಗೆ ಸೇಲ್

ಪರಪ್ಪನ ಅಗ್ರಹಾರ ಜೈಲಿನಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಮೊಬೈಲ್ 1 ಲಕ್ಷ ರೂ.ಗೆ ಸೇಲ್

ರಾಚಪ್ಪಾಜಿ ನಾಯ್ಕ್
| Edited By: |

Updated on: Sep 11, 2026 | 11:32 AM

Share

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪೂರೈಕೆ ಜಾಲದ ರಹಸ್ಯ ಬಯಲಾಗಿದೆ. ಒಂದು ಮೊಬೈಲ್‍ಗೆ ಲಕ್ಷ ರೂ, ಸಿಮ್‍ಗೆ 50 ಸಾವಿರ ರೂ. ದರ ನಿಗದಿಪಡಿಸಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 300ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಐವರು ವಾರ್ಡರ್‌ಗಳು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಆಂಧ್ರದಲ್ಲಿ ಸಿಮ್ ಸಕ್ರಿಯಗೊಳ್ಳುತ್ತಿತ್ತು.

ಬೆಂಗಳೂರು, ಸೆಪ್ಟೆಂಬರ್ 11: ಪರಪ್ಪನ ಅಗ್ರಹಾರ ಜೈಲಿನೊಳಗೆ ನಡೆಯುತ್ತಿದ್ದ ಮೊಬೈಲ್ ಪೂರೈಕೆ ಜಾಲವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇದಿಸಿದ್ದಾರೆ. ಜೈಲಿನೊಳಗೆ ಒಂದು ಮೊಬೈಲ್‍ಗೆ ಒಂದು ಲಕ್ಷ ರೂಪಾಯಿ ಮತ್ತು ಒಂದು ಸಿಮ್‍ಗೆ 50 ಸಾವಿರ ರೂಪಾಯಿ ದರ ನಿಗದಿಪಡಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಿಮ್‌ಗಳು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಸಕ್ರಿಯಗೊಳ್ಳುತ್ತಿದ್ದವು.

ಸಿಸಿಬಿ ಪೊಲೀಸರು ಈ ಹಿಂದೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಹಚ್ಚಿದ ನಂತರ, ಈ ಜಾಲವನ್ನು ಭೇದಿಸಲು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆಯ ವೇಳೆ, ಜೈಲಿನಲ್ಲಿ ವಾರ್ಡರ್‌ಗಳು ಮತ್ತು ಕೆಲವು ಅಪರಾಧಿಗಳ ಮೂಲಕ ಮೊಬೈಲ್‌ಗಳು ಮತ್ತು ಸಿಮ್‌ಗಳನ್ನು ಪೂರೈಸಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ.

ಈ ಕಾರ್ಯಾಚರಣೆಯಲ್ಲಿ 300ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಾರ್ಡರ್‌ಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಜೈಲಿನೊಳಗೆ ಮೊಬೈಲ್ ಬಳಕೆಗೆ ಸ್ಮಾರ್ಟ್ ಫೋನ್, ಆಂಡ್ರಾಯ್ಡ್ ಫೋನ್ ಹಾಗೂ ಕೀಪ್ಯಾಡ್ ಫೋನ್‌ಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us