ಮೈಸೂರು: ಶಿಕ್ಷಕರು ಬೇಕೆಂದು ಆಗ್ರಹಿಸಿ ಕೋಣನೂರು ಸರ್ಕಾರೀ ಶಾಲೆ ಮಕ್ಕಳು, ಪೋಷಕರಿಂದ ಪ್ರತಿಭಟನೆ

Updated on: Jul 05, 2025 | 11:03 AM

ಕೋಣನೂರು ಗ್ರಾಮದ ಜನ ತಮ್ಮ ಬೇಡಿಕೆಯನ್ನು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಬಿಈಓ ಮತ್ತು ಡಿಡಿಪಿಐಗೆ ತಿಳಿಸಿರುತ್ತಾರೆ, ಅದರೆ ಅವರಿಂದ ಯಾವುದೇ ಕ್ರಮ ಜರುಗದ ಕಾರಣ ಪ್ರತಿಭಟನೆಗೆ ಇಳಿದಿರುತ್ತಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಡತ್ವ ಆವರಿಸಿರಬಹುದು. ಶಿಕ್ಷಣ ಸಚಿವರು ಮಧ್ಯಪ್ರವೇಶಿಸುವ ಅನಿವಾರ್ಯತೆ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಮೈಸೂರು, ಜುಲೈ 5: ರಾಜ್ಯದ ಸರ್ಕಾರಿಗಳಲ್ಲಿ ಒದಗಿಸುವ ಶಿಕ್ಷಣದ ಗುಣಮಟ್ಟ ಮತ್ತು ಶಾಲೆಗಳಿಗೆ ಮೂಲಭೌತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಉತ್ಸಾಹೀ ಶಿಕ್ಷಣ ಸಚಿವ ಮಧು ಬಂಗಾರಪ್ಪಹಳ ಮುತುವರ್ಜಿಯಿಂದ ಮಾತಾಡುತ್ತಾರೆ. ಅದರೆ ರಾಜ್ಯ ಗ್ರಾಮೀಣ ಭಾಗದ ಹಲವಾರು ಶಾಲೆಗಳಲ್ಲಿ ಅನೇಕ ಕುಂದುಕೊರತೆಗಳಿವೆ. ಜಿಲ್ಲೆಯ ನಂಜನಗೂಡು ತಾಲೂಕು ಕೋಣನೂರು ಗ್ರಾಮದ ಹಿರಿಯ ಪ್ರಾಥಮಿಕ (Konanur HPS) ಶಾಲೆಯ ಮಕ್ಕಳು ಮತ್ತು ಪೋಷಕರಿಗೆ ಅಲ್ಲಿನ ಇಂಗ್ಲಿಷ್ ಶಿಕ್ಷಕ ಬೇಕಾಗಿಲ್ಲ ಮತ್ತು ಶಾಲೆಗೆ ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ. ಹಾಗಾಗೇ, ಮಕ್ಕಳೊಂದಿಗೆ ಅವರ ಪೋಷಕರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು

ಇದನ್ನೂ ಓದಿ:  SSLC, ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್​ಗೆ ಅವಕಾಶ ನೀಡುವ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ