ಹೈಕಮಾಂಡ್ ವೀಣಾ ಪರವಾಗಿರುವುದರಿಂದ ಲೋಕ ಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವುದು ಕಷ್ಟವಾಗಲಾರದು: ವಿಜಯಾನಂದ ಕಾಶಪ್ಪನವರ್

|

Updated on: Nov 22, 2023 | 2:48 PM

ಈ ಬಾರಿಯೂ ಅವರಿಗೆ ಟಿಕೆಟ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ವಿಜಯಾನಂದ ಹೇಳಿದರು. ಕಳೆದ ಬಾರಿ ಸೋಲು ಅನುಭವಿಸಿದರೂ ವೀಣಾ ಎದೆಗುಂದಿಲ್ಲ, ಬಾಗಲಕೋಟೆ ಲೋಕ ಸಭಾ ಕ್ಷೇತ್ರದ ಎಲ್ಲ 8 ಮತಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ವಿಜಯಾನಂದ ಹೇಳಿದರು

ಬಾಗಲಕೋಟೆ: ವೀಣಾ ಕಾಶಪ್ಪನವರ್ (Veena Kashappanavar) ಸೋಮವಾರದಂದು ವಿಜಯಪುರ ಬಳಿ ನಡೆದ ಕಾರು ಅಪಘಾತವೊಂದರಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲ್ಲಿ ಚಿಕಿತ್ಸೆ ಪಡೆದು ನಿನ್ನೆ ಸಾಯಂಕಾಲ ಬಾಗಲಕೋಟೆಗೆ ಮರಳಿದ್ದನ್ನು ವರದಿ ಮಾಡಿದ್ದೇವೆ. ನಗರದಲ್ಲಿ ಇಂದು ಅವರ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಸುದ್ದಿಗೋಷ್ಟಿ ನಡೆಸಿದಾಗ ವೀಣಾ ಪಕ್ಕದಲ್ಲಿ ಕುಳಿತಿದ್ದರು. ನಿಮಗೆ ನೆನಪಿರಬಹುದು, 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀಣಾ, ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ (PC Gaddigoudar) ವಿರುದ್ಧ ಸೋತರೂ ಸುಮಾರು 5 ಲಕ್ಷ ವೋಟು ಗಿಟ್ಟಿಸುವಲ್ಲಿ ಸಫಲರಾಗಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ವಿಜಯಾನಂದ ಹೇಳಿದರು. ಕಳೆದ ಬಾರಿ ಸೋಲು ಅನುಭವಿಸಿದರೂ ವೀಣಾ ಎದೆಗುಂದಿಲ್ಲ, ಬಾಗಲಕೋಟೆ ಲೋಕ ಸಭಾ ಕ್ಷೇತ್ರದ ಎಲ್ಲ 8 ಮತಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ವಿಜಯಾನಂದ ಹೇಳಿದರು. ಹೈಕಮಾಂಡ್ ವೀಣಾ ಪರವಾಗಿದೆ ಎಂದ ಅವರು, ಟಿಕೆಟ್ ಪಡೆಯುವುದು ಸಮಸ್ಯೆಯಾಗಲಿಕ್ಕಿಲ್ಲ ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ