ಪಾರ್ವತಮ್ಮ ಐದನೇ ವರ್ಷದ ಪುಣ್ಯಸ್ಮರಣೆ; ರಾಜ್​ಕುಮಾರ್ ಅಕಾಡೆಮಿ ಸಾಧನೆಯನ್ನು ಅಮ್ಮನಿಗೆ ಅರ್ಪಿಸಿದ ರಾಘಣ್ಣ

| Updated By: ರಾಜೇಶ್ ದುಗ್ಗುಮನೆ

Updated on: May 31, 2022 | 12:21 PM

ರಾಜ್​ಕುಮಾರ್ ಅಕಾಡೆಮಿಯಿಂದ 8 ಮಂದಿ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಈ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಸಂತಸ ಇದೆ.

ಇಂದು (ಮೇ 31) ಪಾರ್ವತಮ್ಮ ರಾಜ್​ಕುಮಾರ್ ಅವರ (Parvathamma Rajkumar) ಐದನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಪಾರ್ವತಮ್ಮ ಅವರ ಸಮಾಧಿಗೆ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರು ಆಗಮಿಸಿ ನಮಿಸಿದ್ದಾರೆ. ಈ ವೇಳೆ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ರಾಜ್​ಕುಮಾರ್ ಅಕಾಡೆಮಿಯಿಂದ 8 ಮಂದಿ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಈ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಸಂತಸ ಇದೆ. ‘ನಮ್ಮ ಅಕಾಡೆಮಿಯಿಂದ 8 ಮಂದಿ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಇದನ್ನು ನಾನು ನಮ್ಮ ತಾಯಿಗೆ ಅರ್ಪಣೆ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ರಾಜ್​​ಕುಮಾರ್ ಅಕಾಡೆಮಿಯಲ್ಲಿ ಓದಿದ ಬೆನಕ ಪ್ರಸಾದ್ 92ನೇ ರ‍್ಯಾಂಕ್ ಬಂದಿದ್ದಾರೆ. ನಿಖಿಲ್ ಬಿ. ಪಾಟೀಲ್ 139ನೇ ರ‍್ಯಾಂಕ್, ರಾಜೇಶ್ ಪೊನ್ನಪ್ಪ 222ನೇ ರ‍್ಯಾಂಕ್, ದೀಪಕ್ ಆರ್. ಶೇಟ್ 311ನೇ ರ‍್ಯಾಂಕ್, ಮೇಘನಾ ಕೆ.ಟಿ. 425ನೇ ರ‍್ಯಾಂಕ್, ಪ್ರೀತಿ ಪಂಚಾಲ್ 449ನೇ ರ‍್ಯಾಂಕ್, ರವಿನಂದನ್ ಬಿ.ಎಂ. 455ನೇ ರ‍್ಯಾಂಕ್, ಪ್ರಶಾಂತ್ ಕುಮಾರ್ ಬಿ.ಒ. 641ನೇ ರ‍್ಯಾಂಕ್ ಬಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.