ಉತ್ತರ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಂದೆಯ ಆಕ್ರಂದನ ನಮ್ಮ ಕಣ್ಣುಗಳನ್ನು ಒದ್ದೆ ಮಾಡುತ್ತದೆ
ಅಪಘಾಘತದಲ್ಲಿ ಗುರುತು ಹಿಡಿಯಲಾಗದಷ್ಟು ಜಜ್ಜಿ ಹೋಗಿರುವ ದೇಹಗಳನ್ನು ಲಖಿಂಪುರನಿಂದ ಮೊದಲು ಹೈದರಾಬಾದ್ ಗೆ ಮತ್ತು ಅಲ್ಲಿಂದ ಬೀದರ್ ಗೆ ಅಂಬ್ಯುಲೆನ್ಸ್ಗಳಲ್ಲಿ ತರಲಾಯಿತು. ದೇಹಗಳು ಅಗಮಿಸುವ ಮುನ್ನ ಬೀದರ್ ಜಿಲಾಸ್ಪತ್ರೆಯ ಮುಂದೆ ಮೃತರ ಸಂಬಂಧಿಕರು ನೆರೆದಿದ್ದರು.
ಬೀದರ್ ನಗರದ ಈ ಹಿರಿಯ ವ್ಯಕ್ತಿಯ ಆಕ್ರಂದನ ನೋಡಲಾಗದು. ರವಿವಾರ ಉತ್ತರ ಪ್ರದೇಶದ ಲಖಿಂಪುರನಲ್ಲಿ (Lakhimpur) ಸಂಭಿವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಬೀದರ್ (Bidar) 8 ನಿವಾಸಿಗಳಲ್ಲಿ ಅವರ ಮಗನೂ ಒಬ್ಬ. ಅಪಘಾಘತದಲ್ಲಿ ಗುರುತು ಹಿಡಿಯಲಾಗದಷ್ಟು ಜಜ್ಜಿ ಹೋಗಿರುವ ದೇಹಗಳನ್ನು ಲಖಿಂಪುರನಿಂದ ಮೊದಲು ಹೈದರಾಬಾದ್ ಗೆ (Hyderabad) ಮತ್ತು ಅಲ್ಲಿಂದ ಬೀದರ್ ಗೆ ಅಂಬ್ಯುಲೆನ್ಸ್ಗಳಲ್ಲಿ ತರಲಾಯಿತು. ದೇಹಗಳು ಅಗಮಿಸುವ ಮುನ್ನ ಬೀದರ್ ಜಿಲಾಸ್ಪತ್ರೆಯ ಮುಂದೆ ಮೃತರ ಸಂಬಂಧಿಕರು ನೆರೆದಿದ್ದರು. ವಿಡಿಯೋಲ್ಲಿ ಕಾಣುತ್ತಿರುವ ಹಿರಿಯ ನಾಗರಿಕರು ಒಬ್ಬರೇ ಇದ್ದಾರೆ. ಅವರ ಜೊತೆ ಬೇರೆ ಸಂಬಂಧಿಕರಾರೂ ಕಾಣುತ್ತಿಲ್ಲ. ಅಥವಾ ಅವರು ಆಸ್ಪತ್ರೆಯ ಬೇರೆ ಭಾಗದಲ್ಲಿ ಇದ್ದಿರಬಹುದು.
ಈಗಾಗಲೇ ವರದಿಯಾಗಿರುವ ಹಾಗೆ, ಬೀದರ್ ನಿಂದ ಅಯೋಧ್ಯಾಗೆ 16 ಜನರನ್ನು ಹೊತ್ತು ಹೋಗುತ್ತಿದ್ದ ಟೆಂಪೋ ಟ್ರ್ಯಾವೆಲ್ಲರ್ ಉತ್ತರ ಪ್ರದೇಶದ ಲಖೀಂಪುರಗೆ ಹತ್ತಿರವಿರುವ ಮೋತಿಪುರ್ ನಾನಿಹಾ ಮಾರ್ಕೆಟ್ ಪ್ರದೇಶದಲ್ಲಿ ಎದುರಿನಿಂದ ಬರುತ್ತಿದ್ದ ಟಕ್ಕೊಂದಕ್ಕೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ. ಆಪಘಾತದ ತೀವ್ರತೆ ಎಷ್ಟಿತ್ತೆಂದರೆ ಟೆಂಪೋನಲ್ಲಿದ್ದ 16 ಜನರ ಪೈಕಿ ಸ್ಥಳದಲ್ಲೇ 7 ಜನ ಮೃತಪಟ್ಟರೆ ಮಿಕ್ಕಿದವರೆಲ್ಲ ಗಂಭೀರವಾಗಿ ಗಾಯಗೊಂಡರು.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಒಬ್ಬ ಯುವತಿ ಕೊನೆಯುಸಿರೆಳೆದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಪೋನಲ್ಲಿ ಮಾತಾಡಿ ಮೃತದೇಹಗಳನ್ನು ರಾಜ್ಯಕ್ಕೆ ಕಳಿಸುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ ಬಳಿಕ ಅವುಗಳನ್ನು ವಿಮಾನದಲ್ಲಿ ಹೈದರಾಬಾದ್ ಗೆ ತರಲಾಯಿತು. ಬೀದರ್ ಜಿಲ್ಲಾಧಿಕಾರಿಯವರು ದೇಹಗಳನ್ನು ಹೈದರಾಬಾದ್ ನಿಂದ ತರಲು ಅಂಬ್ಯುಲೆನ್ಸ್ ಗಳನ್ನು ಕಳಿಸಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.