ಪ್ರಯತ್ನ, ಪರಿಶ್ರಮದಿಂದ ಮಾತ್ರ ಯಶ ಸಾಧಿಸಿ ಗುರಿ ಮುಟ್ಟುವುದು ಸಾಧ್ಯ ಅನ್ನುತ್ತಾರೆ ಯುಪಿಎಸ್ಸಿಯಲ್ಲಿ ರಾಜ್ಯಕ್ಕೆ 10ನೇ ಱಂಕ್ ಪಡೆದಿರುವ ಸಾಹಿತ್ಯ
ಸಾಹಿತ್ಯ 6ನೇ ಪ್ರಯತ್ನದಲ್ಲಿ ಐಎಎಸ್ ಪಾಸು ಮಾಡಿದ್ದಾರೆ. ಈ ಆರು ವರ್ಷಗಳ ಕಾಲ ಅವರು ತಮ್ಮ ಮೇಲೆ ಬಹಿಷ್ಕಾರ ಹೇರಿಕೊಂಡು, ಒಂದು ರೂಮಿನಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಓದುತ್ತಾ ತಯಾರಿ ನಡೆಸಿದ್ದಾರೆ. ದೆಹಲಿಗೆ ಹೋಗಿ ಅಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದಾರೆ.
ಬೆಳಗಾವಿ: ಜಿಲ್ಲೆಯ ಬೈಲಹೊಂಗಲದ ಈ ಕನ್ನಡದ ಯುವತಿ ನಮ್ಮಲ್ಲೆರಲ್ಲಿ ಹೆಮ್ಮೆ, ಅಭಿಮಾನ ಮೂಡುವ ಸಾಧನೆ ಮಾಡಿದ್ದಾರೆ. ಕೇಂದ್ರ ಲೋಕ ಸೇವಾ ಆಯೋಗದ (UPSC) ಪರೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ ಮತ್ತು ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ (Sahitya Mallikarjun Aladakatti) ಹೆಸರಿನ ರಾಜ್ಯಕ್ಕೆ 10ನೇ ಱಂಕ್ ಮತ್ತು ದೇಶಕ್ಕೆ 250 ನೇ ಱಂಕ್ ಪಡೆದು ಪಾಸಾಗಿದ್ದಾರೆ. ಭಾರತೀಯ ಆಡಳಿತಾತ್ಮಕ ಸೇವೆ (IAS) ಪರೀಕ್ಷೆ ಪಾಸು ಮಾಡುವುದು ಬಹಳ ಕಷ್ಟ ಅಂತ ನಮ್ಮೆಲ್ಲರಿಗೆ ಗೊತ್ತಿರುವ ವಿಚಾರವೇ. ಭಾರಿ ಪ್ರತಿಭೆ ಮತ್ತು ದಣಿವರಿಯದ ಪರಿಶ್ರಮಂದಿಂದ ಮಾತ್ರ ಇದನ್ನು ಕ್ರ್ಯಾಕ್ ಮಾಡಬಹುದು. ಇಂಜಿನೀಯರಿಂಗ್ ಪದವೀಧರರೆ ಸಾಹಿತ್ಯ ಅವರಿಗೆ ಅದು ಮತ್ತೂ ಕಷ್ಟವಾಗಿತ್ತು. ಯಾಕೆಂದರೆ, ಇಕನಾಮಿಕ್ಸ್ ಮತ್ತು ಸಮಾಜ ಶಾಸ್ತ್ರ ಅವರು ಯಾವತ್ತೂ ಓದಿದವಲ್ಲ. ಈ ವಿಡಿಯೋನಲ್ಲಿ ಸಾಹಿತ್ಯ ತಮ್ಮ ಅನುಭವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಸಾಹಿತ್ಯ 6ನೇ ಪ್ರಯತ್ನದಲ್ಲಿ ಐಎಎಸ್ ಪಾಸು ಮಾಡಿದ್ದಾರೆ. ಈ ಆರು ವರ್ಷಗಳ ಕಾಲ ಅವರು ತಮ್ಮ ಮೇಲೆ ಬಹಿಷ್ಕಾರ ಹೇರಿಕೊಂಡು, ಒಂದು ರೂಮಿನಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಓದುತ್ತಾ ತಯಾರಿ ನಡೆಸಿದ್ದಾರೆ. ದೆಹಲಿಗೆ ಹೋಗಿ ಅಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದಾರೆ. ದೆಹಲಿಯಲ್ಲಿರುವಾಗ ಅವರು ಒಂದು ದಿನವೂ ವಿಶ್ರಮಿಸದೆ ಓದಿದ್ದಾರಂತೆ. ಪ್ರತಿವರ್ಷ ಸುಮಾರು 6 ಲಕ್ಷ ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಾರೆ, ಎಲ್ಲರೂ ಹಾರ್ಡ್ ವರ್ಕ್ ಮಾಡುತ್ತಾರೆ, ತಾನು ಅವರಿಗಿಂತ ಭಿನ್ನವೇನೂ ಅಂತ ವಿನಮ್ರತೆಯಿಂದ ಹೇಳುವ ಅವರು ಹಿಂದಿನ 5 ಪ್ರಯತ್ನಗಳಲ್ಲಿ ಪ್ರತಿಬಾರಿ ಒಂದೊಂದು ಹಂತ ಮೇಲಕ್ಕೆ ಹೋಗಿರುವುದಾಗಿ ಅನ್ನುತ್ತಾರೆ.
ತಮ್ಮ ಯಶಸ್ಸಿಗೆ ಕುಟುಂಬದ ಸದಸ್ಯರು, ಸ್ನೇಹಿತರು, ಕಲಿಸಿದ ಗುರುಗಳು ನೀಡಿದ ಕೊಡುಗೆಯನ್ನು ಕೃತಜ್ಞತೆಯಿಂದ ಸಾಹಿತ್ಯ ನೆನೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಬಗೆಯ ಪ್ರತಿಭೆ ಇರುತ್ತದೆ. ಅದರಲ್ಲಿ ಪ್ರಾವೀಣ್ಯತೆ ಸಾಧಿಸುತ್ತಲೇ ಇರಬೇಕು. ನಮ್ಮ ಪ್ರಯತ್ನ ಮತ್ತು ಪರಿಶ್ರಮದಿಂದಲೇ ಯಶಸ್ಸು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.
ಕರ್ನಾಟಕದಲ್ಲೇ ಸೇವೆ ಮಾಡುವ ಆಕಾಂಕ್ಷೆ ಇಟ್ಟುಕೊಂಡಿರುವ ಸಾಹಿತ್ಯ ಅವರಿಗೆ ಶಿಕ್ಷಣ ಮತ್ತು ಆರೋಗ್ಯ ನೆಚ್ಚಿನ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲೇ ಕೆಲಸ ಮಾಡಲು ಇಚ್ಛಿಸುವುದಾಗಿ ಅವರು ಹೇಳುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.