ಚಲಿಸುತ್ತಿದ್ದ ರೈಲಿಗೆ ಕಲ್ಲು ಎಸೆದ ಯುವಕ, ಓರ್ವ ಪ್ರಯಾಣಿಕನಿಗೆ ಗಾಯ
ಚಲಿಸುತ್ತಿದ್ದ ಭಾಗಲ್‌ಪುರ-ಜಯನಗರ ಎಕ್ಸ್‌ಪ್ರೆಸ್ ರೈಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲು ತೂರಾಟ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಪರಿಣಾಮ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಎಕ್ಸ್ನಲ್ಲಿ ಸುಪಾಲ್ ವಾಯ್ಸ್ ಎಂಬ ಖಾತೆಯು ಘಟನೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದೆ.
ಚಲಿಸುತ್ತಿದ್ದ ರೈಲಿನ ಮೇಲೆ ಯುವಕನೊಬ್ಬ ಕಲ್ಲು ಎಸೆದ ಪರಿಣಾಮ ಪ್ರಯಾಣಿಕ ಗಾಯಗೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಭಾಗಲ್ಪುರ-ಜೈನಗರ ಎಕ್ಸ್‌ಪ್ರೆಸ್ ರೈಲಿನ ಮೇಲೆ ಯುವಕ ಕಲ್ಲು ತೂರಾಟ ನಡೆಸಿದ್ದಾನೆ. ಈ ಚಿತ್ರಗಳನ್ನು ಪ್ರಯಾಣಿಕರ್ಯಾರೋ ಸೆರೆ ಹಿಡಿದಿದ್ದಾರೆ.
ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲೊಂದರಲ್ಲಿ ಯುವಕನೊಬ್ಬ ರೈಲಿನ ಮೇಲೆ ಕಲ್ಲು ಎಸೆಯುವುದನ್ನು ಹತ್ತಿರದಿಂದ ಕಾಣಬಹುದು. ಇನ್ನೊಂದು ಚಿತ್ರದಲ್ಲಿ ಗಾಯಗೊಂಡಿರುವ ಪ್ರಯಾಣಿಕನನ್ನು ಕಾಣಬಹುದು. ದರ್ಬಂಗಾ ಮತ್ತು ಕಾಕರಘಾಟಿ ನಡುವೆ ಕಲ್ಲು ತೂರಾಟ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ಈ ಪೋಸ್ಟ್ಗೆ ರೈಲ್ವೆ ಸಚಿವಾಲಯವೂ ಪ್ರತಿಕ್ರಿಯಿಸಿದೆ. ಘಟನೆಗೆ ಕಾರಣನಾದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆತನ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.
ಸಚಿವಾಲಯವು ಸಾರ್ವಜನಿಕವಾಗಿ ಮನವಿ ಮಾಡಿದ್ದು, ಯಾವುದೇ ಕಲ್ಲು ತೂರಾಟ ಅಥವಾ ಸಮಾಜವಿರೋಧಿ ನಡವಳಿಕೆಗಳು ಕಂಡು ಬಂದರೆ ಅಧಿಕಾರಿಗಳಿಗೆ ತಕ್ಷಣವೇ ವರದಿ ಮಾಡುವಂತೆ ನಾಗರಿಕರನ್ನು ಒತ್ತಾಯಿಸಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ