ಕಲಬುರಗಿ: ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವೈದ್ಯಕೀಯ ಶಿಕ್ಷಣ ಸಚಿವರ ತವರಲ್ಲೇ ಅಧ್ವಾನ

Edited By:

Updated on: Mar 24, 2025 | 11:19 AM

ವಿದ್ಯುತ್ ಕೈ ಕೊಟ್ಟಾಗ ಅದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆ ಮಾಡಿಟ್ಟುಕೊಳ್ಳದ ಕಾರಣ ಜಿಮ್ಸ್ ಆಸ್ಪತ್ರೆಯಲ್ಲಿ ಯಡವಟ್ಟಾಗಿದೆ. ಪರ್ಯಾಯ ವ್ಯೆವಸ್ಥೆ ಇಲ್ಲದ ಕಾರಣ ಸಿಬ್ಬಂದಿ ಹ್ಯಾಂಡ್ ಪಂಪ್​ನಿಂದ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ಹತ್ತರಿಂದ ಹದಿನದು ನಿಮಿಷದಲ್ಲಿ ವಿದ್ಯುತ್ ಬಂದಿದೆ, ಹಾಗಾಗಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಕಲಬುರಗಿ, ಮಾರ್ಚ್ 24: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತವರು ಜಿಲ್ಲೆಯ ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಶನಿವಾರ ಸಂಜೆ ವಿದ್ಯುತ್ ಕೈ ಕೊಟ್ಟಿದ್ದರಿಂದ ಐಸಿಯುನಲ್ಲಿದ್ದ ರೋಗಿಗಳು ಪರದಾಡುವಂತಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ವಿದ್ಯುತ್ ಕೈ ಕೊಟ್ಟ ಬಳಿಕ ಬ್ಯಾಟರಿ ಮೂಲಕ ಆಕ್ಸಿಜನ್ ಪೂರೈಕೆ ಮಾಡಲು ಮುಂದಾಗಿದ್ದರು. ಆದರೆ, ಬ್ಯಾಟರಿಗಳು ಬ್ಯಾಕ್ ಅಪ್ ಬಾರದ ಹಿನ್ನಲೆಯಲ್ಲಿ ಆಫ್ ಆಗಿತ್ತು. ಬಳಿಕ ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ವಿದ್ಯುತ್ ಕೈ ಕೊಟ್ಟಾಗ ಬ್ಯಾಟರಿ ಬ್ಯಾಕಪ್ ಇಲ್ಲದೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಪರದಾಡಿದ್ದರಿಂದ ರೋಗಿಗಳ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ದ ಕಿಡಿ ಕಾರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 24, 2025 06:59 AM