ಶಾಂತಿಪ್ರಿಯ ಮಂಡ್ಯ ಜನರಿಗೆ ಫೆಬ್ರುವರಿ 9ರ ಬಂದ್ ಬೇಕಿಲ್ಲ, ವಿಪಕ್ಷ ನಾಯಕರು ಶಾಂತಿ ಕದಡುವ ಪ್ರಯತ್ನದಲ್ಲಿದ್ದಾರೆ: ಚಲುವರಾಯಸ್ವಾಮಿ
ಜಿಲ್ಲಾಡಳಿತ ಸಭೆಯೊಂದನ್ನು ಆಯೋಜಿಸಿ ಕೆರಗೋಡು ಜನರೊಂದಿಗೆ ಚರ್ಚೆ ನಡೆಸಲಿದ್ದು, ಅವರು ಬೇಕು ಬೇಡಗಳಿಗೆ ಮನ್ನಣೆ ನೀಡಲಿದೆ, ಹಾಗಾಗಿ ಪ್ರಕರಣಕ್ಕೆ ರಾಜಕೀಯ ಲೇಪ ನೀಡುವ ಕಾರ್ಯಕ್ಕೆ ಯಾರೂ ಇಳಿಯಬಾರದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ: ಮಂಡ್ಯದ ಜನರಿಗೆ ರಾಜಕೀಯ ಪಕ್ಷಗಳ ಬಗ್ಗೆ ತಮ್ಮದೇ ಆದ ಒಲವು, ಪ್ರೀತಿ ಮತ್ತು ಅಭಿಮಾನ ಇದೆ, ಆದರೆ ಅಲ್ಲಿನ ಜನ ಶಾಂತಿಪ್ರಿಯರು; ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಂಡ್ಯ ಬಂದ್ ಗೆ ಕರೆಕೊಟ್ಟಿರುವುದು ಇಷ್ಟವಿಲ್ಲ, ಬಂದ್ ಬೇಡ ಅಂತ ಜನಸಾಮಾನ್ಯರು ಹೇಳುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (social media) ವಿಡಿಯೋಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕೆರಗೋಡು ಹನುಮ ಧ್ವಜ ಪ್ರಕರಣವನ್ನು (Keragodu Hanuma Flag Row) ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನವನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮಾಡುತ್ತಿದ್ದಾರೆ, ಆದರೆ ಅವರ ಆಟ ಜನ ನಡೆಲು ಜನ ಬಿಡಲ್ಲ ಎಂದು ಹೇಳಿದರು. ಜಿಲ್ಲಾಡಳಿತ ಸಭೆಯೊಂದನ್ನು ಆಯೋಜಿಸಿ ಕೆರಗೋಡು ಜನರೊಂದಿಗೆ ಚರ್ಚೆ ನಡೆಸಲಿದ್ದು, ಅವರು ಬೇಕು ಬೇಡಗಳಿಗೆ ಮನ್ನಣೆ ನೀಡಲಿದೆ, ಹಾಗಾಗಿ ಪ್ರಕರಣಕ್ಕೆ ರಾಜಕೀಯ ಲೇಪ ನೀಡುವ ಕಾರ್ಯಕ್ಕೆ ಯಾರೂ ಇಳಿಯಬಾರದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ