Loading video

ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕದ ಅರ್ಥವೇನು?

Updated on: Feb 13, 2025 | 12:30 PM

ವಿಜಯನಗರ ಜಿಲ್ಲೆ ಹರಪನಹಳ್ಳಿಯ ದೊಡ್ಡ ಮೈಲಾರಲಿಂಗ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ದೈವವಾಣಿ ನುಡಿದಿದ್ದಾರೆ. ಸಾವಿರಾರು ಭಕ್ತರ ನಡುವೆ ಎಳು ಕೋಟಿ ಎಳು ಕೋಟಿ ಎಂಬ ಘೋಷಣೆಯ ನಡುವೆ ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್​ ಎಂದು ದೈವವಾಣಿ ನುಡಿದಿದ್ದು, ಭಕ್ತರು ನಾನಾ ರೀತಿಯಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಕೆಲವರು ಕೃಷಿ ವಿಚಾರದ ಬಗ್ಗೆ ಹೋಲಿಕೆ ಮಾಡಿದರೆ, ಇನ್ನು ಕೆಲವರು ರಾಜಕಾರಣಕ್ಕೆ ಹೋಲಿಕೆ ಮಾಡುತ್ತಿದ್ದಾರೆ.

ಹರಪನಹಳ್ಳಿ(ವಿಜಯನಗರ), ಫೆಬ್ರವರಿ 13): ವಿಜಯನಗರ ಜಿಲ್ಲೆ ಹರಪನಹಳ್ಳಿಯ ದೊಡ್ಡ ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್​ ಎಂದು ದೈವವಾಣಿ ನುಡಿದಿದ್ದಾರೆ. 9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಗೊರವಪ್ಪ ಸಂಜೆ ಬಿಲ್ಲನ್ನೇರಿ ಸದ್ದಲ್ಲೇ ಎನ್ನುತ್ತಿದ್ದಂತೆ ನೆರದವರೆಲ್ಲ ಶಾಂತರಾಗುತ್ತಿದ್ದಂತೆಯೇ ಕೋಟೆಪ್ಪ ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದು ಮೇಲಿಂದ ಜನರ ಮಧ್ಯ ಜಿಗಿದರು.

ಪ್ರಸಕ್ತ ವರ್ಷದ ಮಳೆಗೆ ಸಮೃದ್ಧವಾಗಿ ಉತ್ತಮ ಫಸಲ ಬರುತ್ತದೆ. ಆದ್ರೆ, ಇಳುವರಿ ಕುಂಠಿತ ಎಂಬ ಸಂದೇಶ ನಿಡಿದ್ದಾರೆ ಎಂದು ಭಕ್ತರು ತಾವು ತಾವೇ ಚರ್ಚೆ ನಡೆಸಿದ್ದಾರೆ. ಇನ್ನು ಕೆಲವರು ಮುಂಬರುವ ದಿನಗಳಲ್ಲಿ ಗಂಭೀರ ಘಟನೆ ನಡೆಯಲಿದೆ. ರಾಜ್ಯ, ರಾಷ್ಟ್ರದಲ್ಲಿ ದೊಡ್ಡ ಘಟನೆ ನಡೆಯಲಿದೆ ಎಂದು ದೈವವಾಣಿಯನ್ನು ನಾನಾ ರೀತಿ ಅರ್ಥೈಸಿಕೊಂಡಿಕೊಂಡಿದ್ದಾರೆ.

Published on: Feb 13, 2025 12:17 PM