ಹುಟ್ಟೂರಲ್ಲಿ ಡಾಲಿ ಧನಂಜಯ್ ಮದುವೆ ಶಾಸ್ತ್ರ; ಶುರುವಾಗಿದೆ ಸಂಭ್ರಮ
ಡಾಲಿ ಧನಂಜಯ್ ಅವರ ವಿವಾಹಕ್ಕೆ ಕ್ಷಣಗಣನೆ ಶುರುವಾಗಿದೆ. ಅದಕ್ಕೂ ಮೊದಲು ಅವರ ಹುಟ್ಟೂರಾದ ಕಾಳೆನಹಳ್ಳಿಯಲ್ಲಿ ವಿವಾಹ ಸಂಭ್ರಮ ಜೋರಾಗಿ ಆರಂಭ ಆಗಿದೆ. ಧನಂಜಯ್ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಧನಂಜಯ್ ಅವರು ಮೈಸೂರಿನಲ್ಲಿ ಧನ್ಯಾ ಅವರನ್ನು ವರಿಸಲಿದ್ದಾರೆ ಎಂಬುದು ವಿಶೇಷ.
ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಅವರು ವಿವಾಹ ಆಗುತ್ತಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 15 ಹಾಗೂ 16ರಂದು ವಿವಾಹ ಶಾಸ್ತ್ರ ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದಿದೆ. ವಿವಾಹ ಪೂರ್ವ ಸಂಪ್ರದಾಯಗಳನ್ನು ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.