ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಮೈಸೂರಲ್ಲಿ ಗಲಾಟೆ ನಡೆದಿದೆ: ತನ್ವೀರ್ ಸೇಠ್
ಗಲಭೆಗೆ ಯಾರೇ ಪ್ರಚೋದನೆ ನೀಡಿದ್ದರು ಅವರು ತಪ್ಪಿತಸ್ಥರು, ಸದ್ಯಕ್ಕೆ ಪೊಲೀಸರ ಮುಂದಿರುವ ಪ್ರಶ್ನೆಯೆಂದರೆ ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸೋದು, ಯಾವ ಮಂತ್ರಿ ಏನು ಹೇಳುತ್ತಾರೆ, ಸರ್ಕಾರದ ಪ್ರತಿಕ್ರಿಯೆ ಏನು ತನಗೆ ಮುಖ್ಯವಲ್ಲ, ತನ್ನ ಮೇಲಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ, ಅಮಾಯಕರಿಗೆ ಶಿಕ್ಷೆಯಾಗಬಾರದು ಮತ್ತು ತಪ್ಪು ಮಾಡಿದವರು ಬಚಾವಾಗಬಾರದು ಎಂದು ಸೇಠ್ ಹೇಳಿದರು.
ಮೈಸೂರು: ನಗರದಲ್ಲಿ ಮೊನ್ನೆ ರಾತ್ರಿ ನಡೆದ ಘಟನೆಯ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದು ದೊಂಬಿ ನಡೆದಿದ್ದು ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಫೋಟೋಗಳನ್ನು ಪೋಸ್ಟ್ ಮಾಡಿದ್ದಕ್ಕೆ ಅಲ್ಲ, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಎಂದು ಹೇಳಿದರು. ಅದರೆ ಅವರು ಪ್ರತಿಭಟನೆ ನಡೆಸಿದ ರೀತಿ ತಪ್ಪು, ಧರ್ಮ ಏನನ್ನು ಬೋಧಿಸುತ್ತದೆ ಅನ್ನೋದನ್ನು ಅವರು ಮನಗಾಣಬೇಕಿತ್ತು, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೆ ಇದಕ್ಕೆಲ್ಲ ಅವಕಾಶವಿರುತ್ತಿರಲಿಲ್ಲ, ತಪ್ಪಿತಸ್ಥರು ಯಾರು ಅನ್ನೋದನ್ನು ಪತ್ತೆ ಮಾಡುವ ಕೆಲಸ ಮಾಡುತ್ತೇನೆ ಅಂತ ತನ್ವೀರ್ ಸೇಠ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರು ಉದಯಗಿರಿ ಗಲಾಟೆ: ಅಸಲಿಗೆ ಅಲ್ಲಿ ನಡೆದಿದ್ದೇನು? ಎಡಿಜಿಪಿ ಆರ್ ಹಿತೇಂದ್ರ ಹೇಳಿದ್ದಿಷ್ಟು