Gruha Jyoti Scheme: ಗೃಹಜ್ಯೋತಿ ಸ್ಕೀಮ್ ನಾಳೆಯಿಂದ ಜಾರಿ, ಆದರೆ ಅರ್ಜಿ ಸಲ್ಲಿಕೆಗೆ ನೂರೆಂಟು ತಾಪತ್ರಯಗಳು!
ಬೆಳಗಾವಿ ನಗರದ ನಿವಾಸಿಗಳು ಹೇಳುವ ಪ್ರಕಾರ ಅರ್ಜಿ ಸಲ್ಲಿಸುವಾಗ ಹಲವಾರು ಅಡಚಣೆ ಎದುರಾಗುತ್ತಿವೆ.
ಬೆಳಗಾವಿ: ಸಿದ್ದರಾಮಯ್ಯ ಸರ್ಕಾರದ (Siddaramaiah government) 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ (Gruha Jyoti scheme) ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಅಧಿಕೃತ ಮೂಲಗಳ ಪ್ರಕಾರ ಒಟ್ಟು 2.14 ಕೋಟಿ ಕುಟುಂಬಗಳು ಯೋಜನೆಯಡಿ ಫಲಾನುಭವಿಗಳಾಗಲಿದ್ದಾರೆ. ಆದರೆ ಸಮಸ್ಯೆಯೆಂದರೆ ಅರ್ಧಕ್ಕಿಂತ ಹೆಚ್ಚು ಜನರ ಅರ್ಜಿ ಇನ್ನೂ ನೋಂದಣಿಯಾಗಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 18ರಿಂದ ಪ್ರಾರಂಭವಾಗಿದೆಯಾದರೂ, ಕಳೆದ 11 ದಿನಗಳ ಅವಧಿಯಲ್ಲಿ ಕೇವಲ 81 ಲಕ್ಷ ಜನರ ಅರ್ಜಿ ಮಾತ್ರ ನೋಂದಣಿಯಾಗಿದೆ. ಬೆಳಗಾವಿ ನಗರದ ನಿವಾಸಿಗಳು ಹೇಳುವ ಪ್ರಕಾರ ಅರ್ಜಿ ಸಲ್ಲಿಸುವಾಗ ಹಲವಾರು ಅಡಚಣೆ ಎದುರಾಗುತ್ತಿವೆ. ಸರ್ವರ್ ಡೌನ್ (server down) ಆಗಿರುತ್ತದೆ, ಬಾಡಿಗೆದಾರರು ಅರ್ಜಿ ಸಲ್ಲಿಸಲು ಆಪ್ಷನ್ ಇಲ್ಲದಿರುವುದು ಪ್ರಮುಖ ಸಮಸ್ಯೆಗಳಾಗಿವೆ. ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ಹಿಡಿಯಲಿರುವುದಂತೂ ಸತ್ಯ. ಇಂಧನ ಸಚಿವ ಕೆಜೆ ಜಾರ್ಜ್ ಪರ್ಯಾಯ ಮಾರ್ಗವೇನಾದರೂ ಸೂಚಿಸಿಯಾರೇ ಅಂತ ಜನ ಕಾಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ