ಉಕ್ರೇನಿನ ಬೇರೆ ಬೇರೆ ಪ್ರಾಂತ್ಯದ ಊರುಗಳಲ್ಲಿರುವ ಜನ ಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ!
ಹಾಳಾಗಿರುವ ಬೇರೆ ಟ್ಯಾಂಕರ್ಗಳು ಈ ವಿಡಿಯೋನಲ್ಲಿ ಕಾಣುತ್ತಿದ್ದು ಅವು ಉಕ್ರೇನಿನ ದೈನೇಸಿ ಮತ್ತು ದಯನೀಯ ಸ್ಥಿತಿಯನ್ನು ವಿವರಿಸುತ್ತವೆ. ಒಂದು ಭಾಗದಲ್ಲಿ ಉಕ್ರೇನಿನ 4-5 ಸೈನಿಕರು ಕಾಣುತ್ತಾರೆ. ಅವರ ಬಳಿ ಯಾವುದೇ ಆಯುಧ ಇದ್ದಂತಿಲ್ಲ.
ರಷ್ಯಾ ಪಡೆಗಳು (Russian forces) ಉಕ್ರೇನಿನ ವಸತಿ ಪ್ರದೇಶಗಳ (residential areas) ಮೇಲೆ ದಾಳಿ ನಡೆಸುತ್ತಿಲ್ಲ, ಹಾಗಾಗಿ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ರಷ್ಯಾದ ಆಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಯುದ್ಧ ಘೋಷಿಸಿದಾಗಿನಿಂದ ಹೇಳುತ್ತಿರುವರಾದರೂ, ಮಕ್ಕಳೂ ಸೇರಿದಂತೆ ನೂರಾರು ಜನ ಯುದ್ಧದಲ್ಲಿ ಹತರಾಗಿದ್ದಾರೆ. ಈ ವಿಡಿಯೋ ನಲ್ಲಿ ನಿಮಗೆ ಉಕ್ರೇನಿನ ಒಂದು ಪುಟ್ಟ ಊರು ಕಾಣುತ್ತದೆ. ಒಂದೇ ಒಂದು ನರಪಿಳ್ಳೆ ಊರಲ್ಲಿ ಕಾಣಸಿಗದು. ಎಲ್ಲರೂ ಪ್ರಾಣ ಉಳಿಸಿಕೊಳ್ಳಲು ಪಲಾಯನಗೈದಿದ್ದಾರೆ. ಈ ಊರಿನ ಸ್ಥಿತಿ ನೋಡಿದರೆ ಅವರ ಅನುಭವಿಸಿದ ಭೀತಿ ಮತ್ತು ಆತಂಕ ಅರ್ಥವಾಗುತ್ತದೆ. ಜನ ಅಲ್ಲೇ ಉಳಿದಿದ್ದರೆ ಬದುಕುಳಿಯುವುದು ಸಾಧ್ಯವಿರಲಿಲ್ಲ. ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಇದನ್ನೆಲ್ಲ ಸೆರಹಿಡಿದಿದ್ದಾರೆ. ದೂರದಲ್ಲಿ ಬಾಂಬ್ ಗಳು ಸ್ಫೋಟಗೊಂಡು ದಟ್ಟವಾದ ಹೊಗೆ ಮತ್ತು ಧೂಳು ಏಳುತ್ತಿರುವುದು ನಿಮಗೆ ಕಾಣುತ್ತದೆ. ವೈರಿಪಡೆಯ ದಾಳಿಯಿಂದ ಉಕ್ರೇನಿನ ಒಂದು ಟ್ಯಾಂಕರ್ ಹೊತ್ತಿ ಉರಿಯುತ್ತಿದೆ.
ಹಾಳಾಗಿರುವ ಬೇರೆ ಟ್ಯಾಂಕರ್ಗಳು ಈ ವಿಡಿಯೋನಲ್ಲಿ ಕಾಣುತ್ತಿದ್ದು ಅವು ಉಕ್ರೇನಿನ ದೈನೇಸಿ ಮತ್ತು ದಯನೀಯ ಸ್ಥಿತಿಯನ್ನು ವಿವರಿಸುತ್ತವೆ. ಒಂದು ಭಾಗದಲ್ಲಿ ಉಕ್ರೇನಿನ 4-5 ಸೈನಿಕರು ಕಾಣುತ್ತಾರೆ. ಅವರ ಬಳಿ ಯಾವುದೇ ಆಯುಧ ಇದ್ದಂತಿಲ್ಲ. ಊರಿನ ರಸ್ತೆ ಮತ್ತು ಮರಗಿಡಗಳನ್ನು ನೋಡುತ್ತಿದ್ದರೆ, ಕೇವಲ 5-6 ದಿನಗಳ ಹಿಂದೆ ಬಗೆಬಗೆಯ ಚಟುವಟಿಕೆಗಳಿಂದ, ಮಕ್ಕಳ ಆಟಪಾಟಗಳಿಂದ ನಳನಳಿಸುತ್ತಿದ್ದ ಊರು ಇವತ್ತು ಪಾಳು ಬಿದ್ದ ಪ್ರಾಚೀನ ಕಾಲದ ಊರಿನಂತೆ ಕಾಣುತ್ತಿದೆ.
ವಿಡಿಯೋ ಕೊನೆಭಾಗದಲ್ಲಿ ಉಕ್ರೇನಿ ಸೈನಿಕನೊಬ್ಬ ಕೆಟ್ಟು ನಿಂತಿರುವ ಅಥವಾ ದಾಳಿಯಲ್ಲಿ ಕ್ಷತಿಗ್ರಸ್ಥ ಗೊಂಡಿರುವ ಟ್ಯಾಂಕರನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದಾನೆ. ಇದು ಒಂದು ಊರಿನ ಚಿತ್ರಣ ಮಾತ್ರ. ಬೇರೆ ಊರುಗಳ ಸ್ಥಿತಿ ಇನ್ನೇನಾಗಿದೆಯೋ? ಯುದ್ಧ ಆದಷ್ಟು ಬೇಗ ಕೊನೆಗೊಳ್ಳಬೇಕು ಮಾರಾಯ್ರೇ.