ಶಿರಾದಲ್ಲಿ ಜೆಡಿ(ಎಸ್) ಮುಖಂಡ ಉಚಿತ ಹೆಲ್ಮೆಟ್ ವಿತರಿಸುವಾಗ ವಾಹನವಿಲ್ಲದವರೂ ಮುಗಿಬಿದ್ದರು!
ನಿರೀಕ್ಷೆಗೆ ಮೀರಿದ ಜನ ಜಮಾಯಿಸಿದ್ದರಿಂದ ಉಗ್ರೇಶ್ ವಿತರಣಾ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಹೊರಟರು.
ತುಮಕೂರು: ನಮ್ಮ ಜಾಯಮಾನವೇ ಹಾಗೆ ಮಾರಾಯ್ರೇ, ಪುಗ್ಸಟ್ಟೆ ಅಂದರೆ ನಂಗೊದಿಷ್ಟು ನಮ್ಮಪ್ಪನಿಗೊಂದಿಷ್ಟು ಅಂತೀವಿ. ಇಲ್ಲಿ ನೋಡಿ, ತುಮಕೂರು ಜಿಲ್ಲೆ ಶಿರಾದ (Sira) ಐಬಿ ಸರ್ಕಲ್ ನಲ್ಲಿ ಜೆಡಿ(ಎಸ್) ಮುಖಂಡ ಉಗ್ರೇಶ್ (Ugresh) ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ ಹಂಚುತ್ತಿದ್ದಾರೆ. ಹೆಲ್ಮೆಟ್ ಗಳನ್ನು (Helmet ) ಒಂದು ವ್ಯಾನಲ್ಲಿ ತುಂಬಿಕೊಂಡು ತರಲಾಗಿದ್ದು ಜನ ಹೆಲ್ಮೆಟ್ ಗಾಗಿ ಮುಗಿಬಿದ್ದಿದ್ದಾರೆ. ವಾಹನವಿಲ್ಲದವರೂ ಹೆಲ್ಮೆಟ್ ಕೇಳುತ್ತಿದ್ದಾರೆ. ನಿರೀಕ್ಷೆಗೆ ಮೀರಿದ ಜನ ಜಮಾಯಿಸಿದ್ದರಿಂದ ಉಗ್ರೇಶ್ ವಿತರಣಾ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಹೊರಟರು.
Published on: Nov 21, 2022 12:13 PM