ಪೊಲೀಸ್​ ಠಾಣೆಯಿಂದಲೇ ಬೆದರಿಕೆ ವಾಯ್ಸ್​ ನೋಟ್​ ಕಳಿಸಿದ ನಯನಾ; ಇಲ್ಲಿದೆ ವೈರಲ್​ ಆಡಿಯೋ

ಪೊಲೀಸ್​ ಠಾಣೆಯಿಂದಲೇ ಬೆದರಿಕೆ ವಾಯ್ಸ್​ ನೋಟ್​ ಕಳಿಸಿದ ನಯನಾ; ಇಲ್ಲಿದೆ ವೈರಲ್​ ಆಡಿಯೋ

TV9 Web
| Updated By: ಮದನ್​ ಕುಮಾರ್​

Updated on: Nov 21, 2022 | 1:07 PM

Nayana Audio Clip: ನಯನಾ ಅವರು ಪೊಲೀಸ್​ ಠಾಣೆಯಲ್ಲೇ ಕುಳಿತು ಸೋಮಶೇಖರ್​ಗೆ ಈ ರೀತಿಯ ಬೆದರಿಕೆ ಸಂದೇಶ ಕಳಿಸಿದ್ದಾರೆ. ಅದರ ಆಡಿಯೋ ಕ್ಲಿಪ್​ ವೈರಲ್​ ಆಗಿದೆ.

ಕಾಮಿಡಿ ನಟರಾದ ಸೋಮಶೇಖರ್​ ಮತ್ತು ನಯನಾ (Nayana) ನಡುವೆ ಕಿರಿಕ್​ ಆಗಿದೆ. ಹಣಕಾಸಿನ ಸಲುವಾಗಿ ವಾಗ್ವಾದ ನಡೆದಿದೆ. ಖಾಸಗಿ ಮನರಂಜನಾ ಕಾರ್ಯಕ್ರಮದಲ್ಲಿ ಗೆದ್ದ ಬಹುಮಾನದ ಮೊತ್ತವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಈ ವೈಮನಸ್ಸು ಮೂಡಿದೆ. ಅದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ ಕೂಡ. ನಯನಾ ಅವರು ಪೊಲೀಸ್​ ಠಾಣೆಯಲ್ಲೇ ಕುಳಿತು ಸೋಮಶೇಖರ್​ಗೆ ಈ ರೀತಿಯ ಬೆದರಿಕೆ (Threat) ಸಂದೇಶ ಕಳಿಸಿದ್ದಾರೆ. ಅದರ ಆಡಿಯೋ ಕ್ಲಿಪ್​ ವೈರಲ್​ ಆಗಿದೆ. ‘ನಾವು ಏನು ಮಾಡೋದಕ್ಕೂ ಹೇಸಲ್ಲ’ ಎಂದು ಅವರು ಹೇಳಿದ್ದಾರೆ. ಬೆದರಿಕೆ ಮತ್ತು ನಿಂದನೆಗೆ ಒಳಗಾದ ಸೋಮಶೇಖರ್​ ಅವರು ದೂರು ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.