ಜೀವ ಬೆದರಿಕೆ, ನಿಂದನೆ ಆರೋಪ; ಹಾಸ್ಯ ನಟಿ ನಯನಾ ವಿರುದ್ಧ ದೂರು ನೀಡಿದ ನಟ ಸೋಮಶೇಖರ್
Comedy Actress Nayana: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಯನಾ ಮತ್ತು ಸೋಮಶೇಖರ್ ನಡುವೆ ಕಿರಿಕ್ ಆಗಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಖಾಸಗಿ ಮನರಂಜನಾ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಂಡ ನಟ ಸೋಮಶೇಖರ್ ಅವರಿಗೆ ಹಾಸ್ಯ ನಟಿ ನಯನಾ ಅವರು ಜೀವ ಬೆದರಿಕೆ (Threat) ಹಾಕಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಕುರಿತು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ (RR Nagar Police station) ದೂರು ದಾಖಲಾಗಿದೆ. ತಮಗೆ ನಯನಾ (Comedy Actress Nayana) ಅವರು ಕೆಟ್ಟದಾಗಿ ನಿಂದಿಸಿ ವಾಯ್ಸ್ ಮೆಸೇಜ್ ಕಳಿಸಿದ್ದಾರೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಟ ಸೋಮಶೇಖರ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ‘ಇನ್ಮುಂದೆ ನಯನಾ ನಮ್ಮ ತಂಟೆಗೆ ಬಾರದಂತೆ ಅವರಿಗೆ ತಿಳುವಳಿಕೆ ನೀಡಿ ಹಾಗೂ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕಾಮಿಡಿ ಕಾರ್ಯಕ್ರಮದ 2ನೇ ರನ್ನರ್ ಅಪ್ ಆಗಿದ್ದ ಸೋಮಶೇಖರ್ ಅವರ ತಂಡಕ್ಕೆ 3 ಲಕ್ಷ ರೂಪಾಯಿ ಬಹುಮಾನ ಹಣ ಬಂದಿತ್ತು. ತಂಡದಲ್ಲಿ ಇದ್ದ ಸೀನಿಯರ್ಗಳಿಗೂ ಬಹುಮಾನದ ಹಣದಲ್ಲಿ ಪಾಲು ನೀಡಬೇಕು ಎಂದು ನಯನಾ ಅವರು ಸೋಮಶೇಖರ್ಗೆ ಕರೆ ಮಾಡಿ ಒತ್ತಾಯ ಹೇರಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಯಲ್ಲೇ ಕುಳಿತು ಬೆದರಿಕೆ ಆಗುವಂತಹ ವಾಯ್ಸ್ ಮೆಸೇಜ್ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
‘ಸೀನಿಯರ್ಗಳಿಗೆ ಹಣ ಕೊಡಲು ವಾಹಿನಿಯವರು ಹೇಳಿರಲಿಲ್ಲ. ಯಾಕೆಂದರೆ ಅವರಿಗೆ ತಿಂಗಳ ಪೇಮೆಂಟ್ ಇರುತ್ತಿತ್ತು’ ಎಂದು ಸೋಮಶೇಖರ್ ಹೇಳಿದ್ದಾರೆ. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಯನಾ ಮತ್ತು ಸೋಮಶೇಖರ್ ನಡುವೆ ಕಿರಿಕ್ ಆಗಿದೆ.
(ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…)
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:33 am, Mon, 21 November 22