ಶಂಕಿತ ಉಗ್ರ ಶಾರಿಖ್ ಆಗಸ್ಟ್ 15 ರಂದು ಶಿವಮೊಗ್ಗದಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದ: ಅಲೋಕ್ ಕುಮಾರ್, ಎಡಿಜಿಪಿ
ಸೆಪ್ಟೆಂಬರ್ 20, 2022ರಿಂದ ಶಾರಿಕ್ ಮೈಸೂರು ನಗರದಲ್ಲಿ ಮೋಹನ್ ಕುಮಾರ್ ಎನ್ನುವವರ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದ ಎಂದು ಎಡಿಜಿಪಿ ಹೇಳಿದರು.
ಮಂಗಳೂರು: ನಗರದ ಆಟೋವೊಂದರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೆ (bomb blast) ಸಂಬಂಧಿಸಿದಂತೆ ಸೋಮವಾರ ಸುದ್ದಿಗೋಷ್ಟಿ ನಡೆಸಿದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ (Alok Kumar) ಅವರು ಶಂಕಿತ ಉಗ್ರ ಶಾರಿಖ್ (Shariq) ಬಗ್ಗೆ ಮಂಗಳೂರು ಪೊಲೀಸ್ ಅತಿ ಶೀಘ್ರವಾಗಿ ಮಾಹಿತಿ ಕಲೆಹಾಕಿದ್ದನ್ನು ಶ್ಲಾಘಿಸಿದರು. ಆಗಸ್ಟ್ 15, 2022 ರಂದು ಶಿವಮೊಗ್ಗದಲ್ಲಿ ಗಲಾಟೆ ನಡೆದಾಗ ಶಾರಿಖ್ ಕೂಡ ಅಲ್ಲೇ ಇದ್ದ ಮತ್ತು ಘಟನೆಯ ಇನ್ನೊಬ್ಬ ರೂವಾರಿ ಜಬೀವುಲ್ಲಾನನ್ನು ಪೊಲೀಸರು ಬಂಧಿಸಿದ ನಂತರ ಅವನು ಅಲರ್ಟ್ ಆಗಿ ಊರೂರು ಅಲೆಯುತ್ತಿದ್ದ ಎಂದು ಅಲೋಕ್ ಕುಮಾರ್ ಹೇಳಿದರು. ಸೆಪ್ಟೆಂಬರ್ 20, 2022ರಿಂದ ಶಾರಿಕ್ ಮೈಸೂರು ನಗರದಲ್ಲಿ ಮೋಹನ್ ಕುಮಾರ್ ಎನ್ನುವವರ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದ ಎಂದು ಎಡಿಜಿಪಿ ಹೇಳಿದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos