ಲೋಕಸಭಾ ಚುನಾವಣೆ ಫಲಿತಾಂಶ: ಹೊರಗಿನವ ಅಂತ ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಉತ್ತರ ನೀಡಿದ್ದಾರೆ: ಜಗದೀಶ್ ಶೆಟ್ಟರ್

|

Updated on: Jun 04, 2024 | 6:09 PM

ಕ್ಷೇತ್ರದ ಅನೇಕ ಕಾರ್ಯಕರ್ತರು ತಾನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ನಾಯಕ ಅಂತ ಗೌರವಿಸಿ ಹಗಲು ರಾತ್ರಿ ತನಗಾಗಿ ಪ್ರಚಾರ ಮಾಡಿದರು. ಅವರ ಸಹಾಯ ಮತ್ತು ಬೆಂಬಲವನ್ನು ತಾನ್ಯಾವತ್ತೂ ಮರೆಯಲಾರೆ, ಅವರ ಪರಿಶ್ರಮದಿಂದ ತಾನು 1.75 ಲಕ್ಷ ಮತಗಳ ಭಾರೀ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ ಎಂದು ಶೆಟ್ಟರ್ ಹೇಳಿದರು.

ಬೆಳಗಾವಿ: ಬೆಳಗಾವಿ ಗಂಡು ಮೆಟ್ಟಿದ ನಾಡು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ಗೆಲುವಿನ ನಂತರ ಮಾಧ್ಯಮ ಗೋಷ್ಠಿಯಲ್ಲಿ ಮಾತಾಡಿದ ಅವರು, ಬೆಳಗಾವಿ ಯಾವತ್ತಿಗೂ ಬಿಜೆಪಿಯ ಭದ್ರಕೋಟೆ; ಸುರೇಶ್ ಅಂಗಡಿಯವರನ್ನು (Suresh Angadi) 4 ಬಾರಿ ಇಲ್ಲಿಂದ ಸಂಸತ್ತಿಗೆ ಕಳಿಸಲಾಗಿತ್ತು ಮತ್ತು ಅವರು ಗತಿಸಿದ ನಂತರ ನಡೆದ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿಯವರನ್ನು (Mangala Angadi) ಜನ ಆಯ್ಕೆ ಮಾಡಿದರು ಎಂದು ಶೆಟ್ಟರ್ ಹೇಳಿದರು. ತಾನು ಇಲ್ಲಿಗೆ ಬಂದಾಗ, ಇಲ್ಲಿನ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಕ್ಷೇತ್ರದ ಅನೇಕ ಕಾರ್ಯಕರ್ತರು ತಾನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ನಾಯಕ ಅಂತ ಗೌರವಿಸಿ ಹಗಲು ರಾತ್ರಿ ತನಗಾಗಿ ಪ್ರಚಾರ ಮಾಡಿದರು. ಅವರ ಸಹಾಯ ಮತ್ತು ಬೆಂಬಲವನ್ನು ತಾನ್ಯಾವತ್ತೂ ಮರೆಯಲಾರೆ, ಅವರ ಪರಿಶ್ರಮದಿಂದ ತಾನು 1.75 ಲಕ್ಷ ಮತಗಳ ಭಾರೀ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ ಎಂದು ಶೆಟ್ಟರ್ ಹೇಳಿದರು. ತನ್ನನ್ನು ಹೊರಗಿನವ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಜನರೇ ಭಾರೀ ಬಹುಮತದೊಂದಿಗೆ ಗೆಲ್ಲಿಸಿ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಶೆಟ್ಟರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Raichur Lok Sabha constituency Election Result 2024: ರಾಯಚೂರಿನಲ್ಲಿ ಗೆಲುವಿನ ನಗೆ ಬೀರಿದ ಕುಮಾರ್ ನಾಯ್ಕ್: ಬಿಜೆಪಿಗೆ ಸೋಲು

Follow us on