ಹಾಸನ: ಸಿದ್ದರಾಮಯ್ಯರನ್ನ ನೋಡಲು ಬೇಲಿ ಜಿಗಿದು ಬಂದ ಜನ

|

Updated on: Mar 05, 2023 | 3:19 PM

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದ ವಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ನೋಡಲು ಜನರು ಬೇಲಿ ನೆಗೆದು ಓಡಿ ಬಂದ್ದಿದ್ದಾರೆ.

ಹಾಸನ: ಜಿಲ್ಲೆಯ ಅರಸೀಕೆರೆ (Arsikere) ತಾಲ್ಲೂಕಿನ ಗುತ್ತಿನಕೆರೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದ ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ನೋಡಲು ಜನರು ಬೇಲಿ ನೆಗೆದು ಓಡಿ ಬಂದ್ದಿದ್ದಾರೆ. ಸಿದ್ದರಾಮಯ್ಯ ಹೆಲಿಕಾಪ್ಟರ್​ನಿಂದ ಇಳಿದು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದದ್ದರು. ಈ ವೇಳೆ ತಮ್ಮ ನಾಯಕನನ್ನು ನೋಡಲು ಹೊಲದೊಳಗೆ ಓಡಿ ಬೇಲಿ ನೆಗೆದು ಧಾವಿಸಿ ಜನರು ಬಂದಿದ್ದಾರೆ. ಅರಸೀಕೆರೆಯ ಗುತ್ತಿನಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಬೃಹತ್ ಬಹಿರಂಗ ಸಭೆ ನಡೆದಿದೆ.