ಕೇಂದ್ರದಲ್ಲಿ ಮಂತ್ರಿಯಾಗಿದ್ದವರಿಗೆ ಭಾಷೆ ಗೊತ್ತಿಲ್ಲಾಂದ್ರೆ ಅವರಲ್ಲಿ ಸಂಸ್ಕೃತಿ, ಮಾನವೀಯತೆ ಇಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Jan 13, 2024 | 6:06 PM

ಇಂದು ಕಾರವಾರದಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಮಾತಾಡಿದ್ದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಏಕವಚನದಲ್ಲಿ ಅವಹೇಳನಕಾರಿ ಸಂಬೋಧಿಸುತ್ತಾ ಮಗನೇ ಅಂತ ಹೇಳಿದ್ದರು. ಸಿದ್ದರಾಮಯ್ಯ ಹೋಗದಿದ್ದರೆ ರಾಮ ಮಂದಿರದ ಉದ್ಘಾಟನೆ ನಿಲ್ಲದು ಅಂತ ಹೇಳುವಾಗ ಹೆಗಡೆ ಹಾಗೆ ಮಾತಾಡಿದ್ದರು.

ಬಾಗಲಕೋಟೆ: ಜಿಲ್ಲೆಯ ಕೂಡಲಸಂಗಮದಲ್ಲಿ ಅಯೋಜಿಸಲಾಗಿರುವ ಶರಣಮೇಳದಲ್ಲಿ ಭಾಗವಹಿಸಲು ಅಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಬಿಜೆಪಿ ನಾಯಕ ಅನಂತಕುಮಾರ ಹೆಗಡೆ (Anantkumar Hegde) ತನ್ನ ವಿರುದ್ಧ ಬಳಸಿರುವ ಅವಹೇಳನಕಾರಿ ಪದಗಳಿಗೆ ಉಗ್ರವಾಗಿ ಪ್ರತಿಕ್ರಿಯಿಸದೆ, ಮಾರ್ಮಿಕ ಎದಿರೇಟು ನೀಡಿದರು. ಅವರ ಸಂಸ್ಕೃತಿಯೇ ಅಂಥದ್ದು ಅಂತ ಹೇಳಿದ ಸಿದ್ದರಾಮಯ್ಯ, ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾಯಿಸಲು (to change the Constitution) ಅಂತ ಹೇಳಿದವರಿಂದ ಸುಸಂಸ್ಕೃತ ಭಾಷೆ ನಿರೀಕ್ಷಿಸುವುದು ಸಾಧ್ಯವೇ? ಅಂಥವರನ್ನು ಸುಸಂಸ್ಕೃತರು ಅಂತ ಹೇಳಲಾದೀತೇ? ಎಂದರು. ಅಶ್ಲೀಲ ಪದ ಬಳಕೆ ಮಾಡುವವರನ್ನು ಗೌರವದಿಂದ ಮಾತಾಡಿ ಅಂತ ಹೇಳಲಾಗಲ್ಲ, ಅಂಥ ಪದಗಳನ್ನು ಬಳಸಿ ಅವರು ಖುದ್ದು ತಮ್ಮ ಘನತೆಗೆ ಕುಂದು ತಂದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಕೇಂದ್ರದಲ್ಲಿ ಮಂತ್ರಿಯಾಗಿದ್ದವರಿಗೆ, ಭಾಷೆಯ ಪರಿಜ್ಞಾನ ಇಲ್ಲ ಅಂತಾದರೆ ಅವರು ಸುಸಂಸ್ಕೃರಲ್ಲ, ಮನುಷ್ಯರಲ್ಲ ಅವರಲ್ಲಿ ಮಾನವೀಯತೆ ಇಲ್ಲ ಅನ್ನೋದು ವೇದ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಕೊಡುವವರು ಇರುತ್ತಾರೆ, ಕೊಡದವರೂ ಇರುತ್ತಾರೆ, ಏನೂ ಮಾಡಕ್ಕಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ