ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ಮಾತು ಮುಖ್ಯವಲ್ಲ ಅಂತ ಪರೋಕ್ಷವಾಗಿ ಹೇಳಿದ ಸಿಟಿ ರವಿ!
ನಮಗೆ ಪರಿಸ್ಥಿತಿಯ ಅರಿವಿದೆ, ಅಭ್ಯರ್ಥಿ ಯಾರೇ ಆಗಿದ್ರೂ ನಾವೇ ಅಭ್ಯರ್ಥಿ ಅಂತ ಕೆಲಸ ಮಾಡುತ್ತೇವೆ, ನಮ್ಮ ಗುರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗೋದನ್ನು ನೋಡೋದು ಎಂದು ರವಿ ಹೇಳಿದರು. ವಿಜಯೇಂದ್ರ ಆಡಿದ ಮಾತಿನ ಬಗ್ಗೆ ರವಿಯವರಲ್ಲಿ ಅಸಮಾಧಾನ ಸ್ಪಷ್ಟವಾಗಿ ಗುರುತಿಸಬಹುದು.
ದಾವಣಗೆರೆ: ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ; ಡಿವಿ ಗುಂಡಪ್ಪ ಅವರ ಕವನದ ಸಾಲುಗಳು ರಾಜಕಾರಣಿಯೊಬ್ಬರ ಬಾಯಿಂದ ಹೊರಬಿದ್ದರೆ ಖುಷಿಯೆನಿಸುತ್ತದೆ. ಹಿರಿಯ ಬಿಜೆಪಿ ನಾಯಕ ಸಿಟಿ ರವಿಯವರಿಗೆ (CT Ravi) ಕನ್ನಡ ಭಾಷೆಯ ಮೇಲೆ ಉತ್ತಮ ಹಿಡಿತವಿದೆ (command over Kannada language) ಅದರಲ್ಲಿ ಸಂದೇಹ ಬೇಡ. ಆದರೆ ವಿಷಯ ಅದಲ್ಲ, ಇವತ್ತು ದಾವಣಗೆರೆಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರ ಮಾತಿನ ಧಾಟಿ ಎಂದಿನಂತಿರಲಿಲ್ಲ. ಅವರ ಮಾತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಅದ್ಯತೆ ನೀಡಲಾಗುವುದು ಅಂತ ನೀಡಿರುವ ಹೇಳಿಕೆಗೆ ಎದಿರೇಟು ನೀಡಿದಂತಿತ್ತು. ಅದೇ ವಿಷಯವಾಗೇ ಅವರು ಡಿವಿಜಿಯವರ ಪದ್ಯ ಹೇಳಿದ್ದು! ಹೊಸಬರ ಮತ್ತು ಹಳಬರ ಸಮ್ಮಿಲನ ಇದ್ದೇ ಇರುತ್ತೆ, ಆದರೆ ಅದರ ನಿರ್ಣಯ ತೆಗೆದುಕೊಳ್ಳೋದು ಪಕ್ಷದ ಸಂಸದೀಯ ಮಂಡಳಿ ಎಂದು ರವಿ ಹೇಳಿದರು. ನಮಗೆ ಪರಿಸ್ಥಿತಿಯ ಅರಿವಿದೆ, ಅಭ್ಯರ್ಥಿ ಯಾರೇ ಆಗಿದ್ರೂ ನಾವೇ ಅಭ್ಯರ್ಥಿ ಅಂತ ಕೆಲಸ ಮಾಡುತ್ತೇವೆ, ನಮ್ಮ ಗುರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗೋದನ್ನು ನೋಡೋದು ಎಂದು ರವಿ ಹೇಳಿದರು. ವಿಜಯೇಂದ್ರ ಆಡಿದ ಮಾತಿನ ಬಗ್ಗೆ ರವಿಯವರಲ್ಲಿ ಅಸಮಾಧಾನ ಸ್ಪಷ್ಟವಾಗಿ ಗುರುತಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ