ವಿವಾದಾತ್ಮಕ ಮಾತುಗಳ ಮೂಲಕ ಪುನಃ ಮುನ್ನೆಲೆಗೆ ಬಂದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ
ಕಾಂಗ್ರೆಸ್ ನಮ್ಮ ವಿರೋಧಿಯಲ್ಲ, ಅದೊಂದು ರಾಜಕೀಯ ಪಕ್ಷ ಅಷ್ಟೇ, ನಮ್ಮನ್ನು ಎದುರಿಸುವಂಥ ಸಾಮರ್ಥ್ಯ ಅದರಲ್ಲಿಲ್ಲ ಆದರೆ ಕಾಂಗ್ರೆಸ್ ನಾಯಕರ ಗತಿಗೆಟ್ಟ ಮಾನಸಿಕತೆ ನಮ್ಮ ವಿರೋಧಿ ಎಂದು ಹೆಗಡೆ ಹೇಳುತ್ತಾರೆ. 22ರಂದು ರಾಮಮಂದಿರಕ್ಕೆ ಹೋಗಲ್ಲ, ಅದಾದ ಮೇಲೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವ ಮಾತನ್ನು ಅಣಕಿಸುವ ಹೆಗಡೆ, ನೀನು ಹೋಗು ಬಿಡು, ರಾಮಮಂದಿರ ನಿಲ್ಲಲ್ಲ ಮಗನೇ! ಅನ್ನುತ್ತಾರೆ.
ಕಾರವಾರ: ಬಹಳ ದಿನಗಳಿಂದ ನೇಪಥ್ಯಕ್ಕೆ ಸರಿದಿದ್ದ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ (Anant Kumar Hegde) ಇಂದು ಕಾರವಾರದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಬೋಧಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಅವಹೇಳನಕಾರಿಯಾಗಿ (derogatory) ಪದ ಬಳಕೆ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಹಿಂದೆ ಕೇಂದ್ರದಲ್ಲಿ ಸಚಿವರಾಗಿದ್ದ ಹೆಗಡೆ ರಾಜ್ಯದ ಮುಖ್ಯಮಂತ್ರಿಯನ್ನು ‘ಮಗನೇ’ ಅಂತ ಹೇಳಿದ್ದನ್ನು ಅವರ ಪಕ್ಷದವರೇ ಅನುಮೋದಿಸಲಾರರು. ರಾಜಕೀಯದಲ್ಲಿ ಟೀಕೆ ಟಿಪ್ಪಣಿ ಸಾಮಾನ್ಯ, ಅದರೆ ಯಾರೂ ಭಾಷೆಯ ಎಲ್ಲೆ ಮೀರಲ್ಲ. ಮೊದಲಿನಿಂದಲೂ ಹಿಂದೂಗಳನ್ನು ಒಡೆಯುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವನ್ನು ಪುನಃ ಮೇಲೇಳದಂತೆ ಮತ್ತು ಪುನರ್ಜನ್ಮ ಕಾಣದಂತೆ ಸೋಲಿಸಬೇಕು ಅಂತ ಹೆಗಡೆ ಹೇಳುತ್ತಾರೆ. ಮುಂದುವರಿದು ಮಾತಾಡುವ ಅವರು ಕಾಂಗ್ರೆಸ್ ನಮ್ಮ ವಿರೋಧಿಯಲ್ಲ, ಅದೊಂದು ರಾಜಕೀಯ ಪಕ್ಷ ಅಷ್ಟೇ, ನಮ್ಮನ್ನು ಎದುರಿಸುವಂಥ ಸಾಮರ್ಥ್ಯ ಅದರಲ್ಲಿಲ್ಲ ಆದರೆ ಕಾಂಗ್ರೆಸ್ ನಾಯಕರ ಗತಿಗೆಟ್ಟ ಮಾನಸಿಕತೆ ನಮ್ಮ ವಿರೋಧಿ ಎಂದು ಅವರು ಹೇಳುತ್ತಾರೆ. 22ರಂದು ರಾಮಮಂದಿರಕ್ಕೆ ಹೋಗಲ್ಲ, ಅದಾದ ಮೇಲೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವ ಮಾತನ್ನು ಅಣಕಿಸುವ ಹೆಗಡೆ, ನೀನು ಹೋಗು ಬಿಡು, ರಾಮಮಂದಿರ ನಿಲ್ಲಲ್ಲ ಮಗನೇ! ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ