AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರದಲ್ಲಿ 20 ಎಕರೆ ಜಾಗದಲ್ಲಿ ರಾಮಮಂದಿರ ಕಟ್ಟಲು ಮುಂದಾದ ಕಾಂಗ್ರೆಸ್​!

ರಾಮನಗರದಲ್ಲಿ 20 ಎಕರೆ ಜಾಗದಲ್ಲಿ ರಾಮಮಂದಿರ ಕಟ್ಟಲು ಮುಂದಾದ ಕಾಂಗ್ರೆಸ್​!

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on:Jan 13, 2024 | 3:56 PM

Share

ಒಂದು ಕಡೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ರಾಮನಗರದಲ್ಲಿ ರಾಮಮಂದಿರ ಕಟ್ಟುವ ಪ್ರತಿಷ್ಠೆಗೆ ಕೈ ನಾಯಕರು ಮುಂದಾಗಿದ್ದಾರೆ. ರಾಮ ಬಿಜೆಪಿ ಸ್ವತ್ತಲ್ಲ, ಸಮಾಜದ ಸ್ವತ್ತು ಎಂದು ಗುಡುಗಿರುವ ಶಾಸಕ‌‌ ಬಾಲಕೃಷ್ಣ ನಾವೂ ಬೃಹತ್ ಮಂದಿರ ಕಟ್ಟುತ್ತೇವೆ ಅಂತ ಗುಡುಗಿದ್ದಾರೆ.

ಒಂದು ಕಡೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ರಾಮನಗರದಲ್ಲಿ ರಾಮಮಂದಿರ ಕಟ್ಟುವ ಪ್ರತಿಷ್ಠೆಗೆ ಕೈ ನಾಯಕರು ಮುಂದಾಗಿದ್ದಾರೆ. ರಾಮ ಬಿಜೆಪಿ ಸ್ವತ್ತಲ್ಲ, ಸಮಾಜದ ಸ್ವತ್ತು ಎಂದು ಗುಡುಗಿರುವ ಶಾಸಕ‌‌ ಬಾಲಕೃಷ್ಣ ನಾವೂ ಬೃಹತ್ ಮಂದಿರ ಕಟ್ಟುತ್ತೇವೆ ಅಂತ ಗುಡುಗಿದ್ದಾರೆ.

ರಾಮಮಂದಿರ ಕಟ್ಟಲು ಕೈ ನಾಯಕರ ಚರ್ಚೆ..!
ಇಡೀ ದೇಶದಲ್ಲಿ ಈಗ ರಾಮಮಂದಿರದ್ದೇ ಚರ್ಚೆ, ‌ ಅಯೋಧ್ಯೆಯ ರಾಮಮಂದಿರ‌ದಲ್ಲಿ ಪ್ರಾಣ‌ ಪ್ರತಿಷ್ಠಾಪನೆ ದಿನ‌ ಹತ್ತಿರ ಆಗುತ್ತಿದ್ದಂತೆ ಎಲ್ಲೆಡೆ ಸಂಭ್ರಮದ‌ ವಾತಾವರಣ ನಿರ್ಮಾಣ ಆಗ್ತಿದೆ. ಅದ್ರಲ್ಲೂ ರೇಷ್ಮೆ ನಗರಿ ರಾಮನಗರದಲ್ಲಿ ಬೃಹತ್ ರಾಮಮಂದಿರ‌ ಕಟ್ಟುವ ಚರ್ಚೆ ಬಿರುಸಾಗಿಯೇ ನಡೆಯುತ್ತಿದೆ.‌ ರಾಮನಗರದಲ್ಲಿ ರಾಮೋತ್ಸವ ಮಾಡುತ್ತೇವೆ ಅಂತ ಶಾಸಕ ಇಕ್ಬಾಲ್ ಹುಸೇನ್ ಹೇಳಿದರೆ, ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ, ರಾಮನಗರಲ್ಲಿ ಬೃಹತ್ ರಾಮಮಂದಿರ ಕಟ್ಟಿ ಅದ್ದೂರಿಯಾಗಿ ಉದ್ಘಾಟನೆ ಮಾಡುತ್ತೇವೆ ಅಂತ ಹೇಳಿದ್ದಾರೆ.

ರಾಮಂದಿರ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡು ನಿಲುವಿಗೆ ಬದ್ಧರಾಗಿರುವ ಸ್ಥಳೀಯ ನಾಯಕರು ಅಯೋಧ್ಯೆ ತೆರಳದೇ ಇರಲು ನಿಶ್ಚಯ ಮಾಡಿದ್ದಾರೆ ಆದರೆ ಇದೇ ವಿಚಾರ ಹಿಂದೂ ಸಮುದಾಯದವರಿಗೆ ಬೇರೆಯದ್ದೆ ಸಂದೇಶ ರವಾನಿಸಬಾರ್ದು ಅಂತ ರಾಮನಗರದಲ್ಲೇ ಬೃಹತ್ ರಾಮಮಂದಿರ ಕಟ್ಟುವ ಯೋಚನೆ‌ಮಾಡಿದ್ದಾರೆ.‌ಈ ಸಂಬಂಧವಾಗಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳ ಜತೆ ಸಭೆ ನಡೆಸಿರುವ ಸಂಸದ ಡಿ ಕೆ ಸುರೇಶ್ ಬೃಹತ್ ರಾಮಮಂದಿರ ನಿರ್ಮಾಣಕ್ಕಗಿ ಬೇಕಾಗುವ ಹತ್ತಾರು ಎಕರೆ ಭೂಮಿ ಹುಡುಕಾಟಕ್ಕೆ ಮುಂದಾಗಿದ್ದಾರೆ,‌ ಐತಿಹಾಸಿಕ ಪವಿತ್ರ ಸ್ಥಳ ರಾಮದೇವರಬೆಟ್ಟದಲ್ಲಿರುವ ರಾಮಮಂದಿರ ಅಭಿವೃದ್ಧಿ ಪಡಿಸಬೇಕು, ಹಾಗೂ ಬಹುದೊಡ್ಡ ಪ್ರದೇಶದಲ್ಲಿ ರಾಮಮಂದಿರ ಕಟ್ಟಬೇಕು ಅಂತ ಅಣಿಯಾಗುತ್ತಿದ್ದಾರೆ

ಈ ಹಿಂದೆಯಿಂದಲೂ ರಾಮದೇವರ ಬೆಟ್ಟದಲ್ಲಿ ರಾಮೋತ್ಸವ ಮಾಡಬೇಕು ಅಂತ ಸ್ಥಳೀಯ ಶಾಸಕ‌ ಇಕ್ಬಾಲ್ ಹುಸೇನ್ ಪ್ಲ್ಯಾನ್ ಮಾಡುವ ಜೊತೆಗೆ ಇನ್ನೊಂದು ಹೆಜ್ಜೆ ಮುಂದು ಹೋಗಿ ಬೃಹತ್ ಮಟ್ಟದ ರಾಮಮಂದರಿ ನಿರ್ಮಾಣ‌ ಮಾಡೋ ವಿಚಾರ ಈಗ ಮುನ್ನೆಲೆಗೆ ಬಂದಿದೆ. ರಾಮದೇವರ ಬೆಟ್ಟ ರಿಸರ್ವ್ ಫಾರೆಸ್ಟ್ ವ್ಯಾಪ್ತಿಗೆ ಬರುವ ಹಿನ್ನೆಲೆ ಪಟ್ಟಣದ ಅಕ್ಕಪಕ್ಕದಲ್ಲೇ ಇಪ್ಪತ್ತು ಎಕರೆ ಜಾಗ ನೋಡಿ ಮಂದಿರ ಕಟ್ಟುಸುತ್ತೇವೆ ಅಂತ ಕೈ ನಾಯಕರು ಒಕ್ಕೊರಲ ದನಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 13, 2024 03:48 PM