Unique Fair:  ಗುಜರಾತ್ ಸಬರ್ಕಾಂತ ಜಿಲ್ಲೆಯ ಗುಣಭಖಾರಿ ಎಂಬಲ್ಲಿ ಸತ್ತ ಪೂರ್ವಿಕರನ್ನು ನೆನೆದು ಶೋಕಿಸಲೆಂದೇ 15-ದಿನ ಚಿತ್ರ ವಿಚಿತ್ರ ಹೆಸರಲ್ಲಿ ಜಾತ್ರೆ ನಡೆಯುತ್ತದೆ!

|

Updated on: Mar 24, 2023 | 2:27 PM

ಜಾತ್ರೆಯಲ್ಲಿ ಜನರು ತಮ್ಮ ಮೃತ ಬಂಧುಗಳು ಮತ್ತು ಪೂರ್ವಜರಿಗೆ ಗೌರವ ಸಲ್ಲಿಸಲು ಸೇರುತ್ತಾರೆ. ಸತ್ತವರ ಚಿತಾಭಸ್ಮವನ್ನು ನದಿಯಲ್ಲಿ ಮುಳುಗಿಸಲಾಗುತ್ತದೆ ಮತ್ತು ಅವರ ಸಾವಿಗೆ ಶೋಕಿಸಲಾಗುತ್ತದೆ.

ಸಬರ್‌ಕಾಂತ  (ಗುಜರಾತ್‌): ವಿಡಿಯೋನಲ್ಲಿ ಕಾಣುವ ಮಹಿಳೆಯರು ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಗುಣಭಖಾರಿ (Gunabhkhari) ಹೆಸರಿನ ಗ್ರಾಮದಲ್ಲಿ ತಮ್ಮ ಪೂರ್ವಜರನ್ನು ನೆನೆದು ದುಃಖಿಸುತ್ತಿದ್ದಾರೆ. ಇದು ಗುಜರಾತ್‌ನ ಅತಿದೊಡ್ಡ ಬುಡಕಟ್ಟು ಜಾತ್ರೆಗಳಲ್ಲಿ (tribal carnival) ಒಂದಾಗಿದೆ ಮತ್ತು ಇದಕ್ಕೆ ಚಿತ್ರ ವಿಚಿತ್ರ ಮೇಳ ಎಂಬ ವಿಚಿತ್ರ ಹೆಸರಿನಿಂದ ಕರೆಯಲಾಗುತ್ತದೆ. ಹೋಳಿ (Holi) ನಂತರ ಹದಿನೈದು ದಿನಗಳ ಕಾಲ ಜಾತ್ರೆಯನ್ನು ಆಯೋಜಿಸಲಾಗುತ್ತದೆ.

ಜಾತ್ರೆಯಲ್ಲಿ ಜನರು ತಮ್ಮ ಮೃತ ಬಂಧುಗಳು ಮತ್ತು ಪೂರ್ವಜರಿಗೆ ಗೌರವ ಸಲ್ಲಿಸಲು ಸೇರುತ್ತಾರೆ. ಸತ್ತವರ ಚಿತಾಭಸ್ಮವನ್ನು ನದಿಯಲ್ಲಿ ಮುಳುಗಿಸಲಾಗುತ್ತದೆ ಮತ್ತು ಅವರ ಸಾವಿಗೆ ಶೋಕಿಸಲಾಗುತ್ತದೆ.

ಇದನ್ನೂ ಓದಿ: Holi 2023: ವಿದೇಶದಲ್ಲೂ ಹೋಳಿ ಆಚರಿಸಿದ ಪ್ರಿಯಾಂಕಾ ಚೋಪ್ರಾ; ಅತಿಥಿಯಾಗಿ ಸಾಥ್​ ನೀಡಿದ ಪ್ರೀತಿ ಜಿಂಟಾ

‘ಈ ಜಾತ್ರೆಯಲ್ಲಿ ಇಲ್ಲಿಯೇ ಅಸ್ಥಿ ನಿಮಜ್ಜನ ನಡೆಯುವುದರಿಂದ ಜನರು ಮೂಳೆಗಳನ್ನು ತರುತ್ತಾರೆ. ಇದು ಮಹಾದೇವನ ನೆಲೆಯಾಗಿದ್ದು ಇಲ್ಲಿ ನದಿಗಳ ಸಂಗಮವಿದೆ. ಕುಟುಂಬದ ಸದಸ್ಯರು ಸತ್ತವರ ಅಸ್ಥಿಯನ್ನು ತೆಗೆದುಕೊಂಡು ಇಲ್ಲಿ ನೀರಿನಲ್ಲಿ ಮುಳುಗಿಸುವ ಪದ್ಧತಿ ಇದೆ,’ ಎಂದು ಗುಣಭಖಾರಿ ಗ್ರಾಮದ ನಿವಾಸಿ ಪರೇಶ್ ಬರುವಾ ಹೇಳುತ್ತಾರೆ.

‘ನಮ್ಮ ಹಿರಿಯರು ಮತ್ತು ಪೂರ್ವಜರು ತಮ್ಮ ಆಸ್ತಿ ಪಾಸ್ತಿ ಎಲ್ಲವನ್ನೂ ಇಲ್ಲಿಯೇ ಹೊಂದಿದ್ದರು; ಹಾಗಾಗಿ, ನಾವು ಅವರ ಚಿತಾಭಸ್ಮವನ್ನು ಇಲ್ಲಿ ವಿಸರ್ಜಿಸುತ್ತೇವೆ,’ ಎಂದು ಮತ್ತೊಬ್ಬ ನಿವಾಸಿ ಜೀತೆಂದ್ರ ಕಟಾರ ಹೇಳುತ್ತಾರೆ.

ಇದನ್ನೂ ಓದಿ:  Pradeep Sarkar Death: ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ

ಗುಜರಾತಿನ ಸಬರ್ಕಾಂತ ಜಿಲ್ಲೆಯ ಗುಣಭಖಾರಿ ಗ್ರಾಮ ರಾಜಸ್ಥಾನದ ಗಡಿಗೆ ಸಮೀಪದಲ್ಲಿದೆ. ಆ ರಾಜ್ಯದ ಜನರು ಸಹ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 24, 2023 02:27 PM