Bengaluru Stampede; ಡ್ರಾಮಾ ಮಾಡೋದ್ರಲ್ಲಿ ಕುಮಾರಸ್ವಾಮಿ ಎಕ್ಸ್​ಪರ್ಟ್ ಅಂತ ಜನರಿಗೆ ಗೊತ್ತಿದೆ: ಡಿಕೆ ಸುರೇಶ್

Updated on: Jun 06, 2025 | 2:39 PM

ಸತ್ತವರ ಮೇಲೆ ರಾಜಕಾರಣ ಮಾಡಿಕೊಂಡು ಕುಮಾರಸ್ವಾಮಿ ರಾಜಕೀಯದಲ್ಲಿ ಬೆಳೆದಿದ್ದು; ಸತ್ತವರ ಕುರಿತಾಗಲೀ, ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆಯಾಗಲೀ ಅವರಿಗೆ ಕಿಂಚಿತ್ತೂ ಗೌರವವಿಲ್ಲ, ರಾಜಕೀಯ ಅರೋಪಗಳನ್ನು ಮಾಡೋದು ಬಿಟ್ಟು ಅವರಿಗೇನೂ ಗೊತ್ತಿಲ್ಲ ಎಂದು ಸುರೇಶ್ ಹೇಳಿದರು. ಕಾಲ್ತುಳಿತ ನಡೆದಿದೆ, ಕಾರ್ಯಕ್ರಮವನ್ನು ಬೇಗ ಮಗಿಸುವಂತೆ ಹೇಳಲು ಶಿವಕುಮಾರ್ ಸ್ಟೇಡಿಯಂಗೆ ತೆರಳಿದ್ದರು ಸುರೇಶ್ ಹೇಳಿದರು.

ಮಂಡ್ಯ, ಜೂನ್ 6: ಗುರುವಾರದಂದು ಬೆಂಗಳೂರು ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದನ್ನು ನಾಟಕ ಎಂದಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾತಿಗೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿಯೇ ಒಬ್ಬ ಪರಿಣಿತ ಡ್ರಾಮಾ ಕಲಾವಿದ, ಅವರು ಯಾವ್ಯಾವ ಸಂದರ್ಭದಲ್ಲಿ ಏನೆಲ್ಲ ಡ್ರಾಮಾಗಳನ್ನು ಮಾಡಿದ್ದಾರೆ, ಸಂದರ್ಭಗಳನ್ನು ಹೇಗೆಲ್ಲ ತಿರುಚಿದ್ದಾರೆ ಅಂತ ತಾನು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಸುರೇಶ್ ಹೇಳಿದರು. ಕಾಲ್ತುಳಿತದಿಂದ ಸತ್ತವರ ಬಗ್ಗೆ ಅವರಿಗೆ ಅನುಕಂಪ ಇಲ್ಲ, ಈ ಸಂದರ್ಭವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಷ್ಟೇ ಅವರಿಗೆ ಬೇಕು ಎಂದು ಸುರೇಶ್ ಹೇಳಿದರು.

ಇದನ್ನೂ ಓದಿ:  ಬೆಂಗಳೂರು ಕಾಲ್ತುಳಿತ: ಎಫ್ಐಆರ್​ನಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ