ದಸರಾ ಹಬ್ಬಕ್ಕೆ ಊರಿನತ್ತ ಹೊರಟ ಜನ; ಬೆಂಗಳೂರಿನ KSRTC ಬಸ್​ ನಿಲ್ದಾಣ ಫುಲ್​ ರಶ್​

|

Updated on: Oct 10, 2024 | 5:22 PM

, ದಸರಾ ಹಬ್ಬಕ್ಕೆ ಜನರು ತಮ್ಮ ಊರುಗಳಿಗೆ ಹೊರಟಿದ್ದು, ಮೆಜೆಸ್ಟಿಕ್ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಟರ್ಮಿನಲ್ 1, 2, 3 ರ ತುಂಬಾ ಪ್ರಯಾಣಿಕರು ತುಂಬಿಕೊಂಡಿದ್ದು, ಬಸ್ ಸೀಟ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಕೆಲವರು ಕಿಟಕಿಗಳ ಮೂಲಕ ಬ್ಯಾಗ್​ಗಳನ್ನು ಹಾಕಿ ಸೀಟ್ ಹಿಡಿಯುತ್ತಿದ್ದಾರೆ.

ಬೆಂಗಳೂರು, ಅ.10: ದಸರಾ ಹಬ್ಬದ ಹಿನ್ನಲೆ ಸಾಲು ಸಾಲು ರಜೆಯಿದ್ದು, ಜನರು ಊರುಗಳತ್ತ ತೆರಳುತ್ತಿದ್ದಾರೆ. ಇದರಿಂದ ಬೆಂಗಳೂರಿನ ಕೆಎಸ್​ಆರ್​ಟಿಸಿ (KSRTC) ಬಸ್​ ನಿಲ್ದಾಣ ತುಂಬಿ ತುಳುಕುತ್ತಿದೆ. ಹೌದು, ದಸರಾ ಹಬ್ಬಕ್ಕೆ ಜನರು ತಮ್ಮ ಊರುಗಳಿಗೆ ಹೊರಟಿದ್ದು, ಮೆಜೆಸ್ಟಿಕ್ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಟರ್ಮಿನಲ್ 1, 2, 3 ರ ತುಂಬಾ ಪ್ರಯಾಣಿಕರು ತುಂಬಿಕೊಂಡಿದ್ದು, ಬಸ್ ಸೀಟ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಬರುತ್ತಿರುವ ಎಲ್ಲಾ ಕೆಎಸ್ಆರ್​ಟಿಸಿ ಬಸ್ಸುಗಳು ಫುಲ್ ಆಗುತ್ತಿವೆ. ಹೀಗಾಗಿ ಜನರು ಕಿಟಕಿಗಳ ಮೂಲಕ ಬ್ಯಾಗ್​ಗಳನ್ನು ಹಾಕಿ ಸೀಟ್ ಹಿಡಿಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ