ಜನ ಇಂಪ್ರೆಸ್​ ಆಗುವ ಮತ್ತು ಇಷ್ಟಪಡುವ ವ್ಯಕ್ತಿತ್ವ ನಿಮ್ಮದಾಗಲು ಡಾ ಸೌಜನ್ಯ ವಶಿಷ್ಠ ಕೆಲ ಟಿಪ್ಸ್ ನೀಡಿದ್ದಾರೆ

ನಮ್ಮ ಬಗ್ಗೆ ನಾವು ಕೊಚ್ಚಿಕೊಳ್ಳುತ್ತಿದ್ದರೆ ಜನಕ್ಕೆ ಖಂಡಿತವಾಗಿಯೂ ಇಷ್ಟಪಡುವುದಿಲ್ಲ ಬೇರೆಯವರು ನಮ್ಮನ್ನು ಹೊಗಳಬೇಕು, self praise has no recommendation ಎಂದು ಸೌಜನ್ಯ ಹೇಳುತ್ತಾರೆ. ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು ಆದರೆ ಅದು ಅತಿಯಾಗಿರಬಾರದು ಎಂದು ಡಾ ಸೌಜನ್ಯ ಹೇಳುತ್ತಾರೆ.

TV9kannada Web Team

| Edited By: shivaprasad.hs

Jan 01, 2022 | 7:23 AM

ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಈ ಸಂಚಿಕೆಯಲ್ಲಿ ಬೇರೆಯವರು ನಮ್ಮನ್ನು ಕಂಡು ಇಂಪ್ರೆಸ್​ ಆಗುವ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳುವುದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ. ಇಂಥ ವ್ಯಕ್ತಿತ್ವದ ಜನರನ್ನು ನಾವು ನೋಡಿತ್ತಿರುತ್ತೇವೆ. ಅವರು ಹೋದೆಡೆ, ಇರುವೆಡೆ ಪಾಸಿಟಿವ್ ಎನರ್ಜಿ ಸೃಷ್ಟಿಯಾಗುತ್ತದೆ. ನಮ್ಮ ವ್ಯಕ್ತಿತ್ವವೂ ಹಾಗಿರಬೇಕು ಅಂದು ನಾವು ಅಂದುಕೊಳುವುದು ಸಹಜವೇ. ಅದರೆ, ಅಂಥ ಪರ್ಸೊನಾಲಿಟಿ ಹೇಗೆ ಬೆಳೆಸಿಕೊಳ್ಳುವುದು? ಅದನ್ನೇ ಡಾ ಸೌಜನ್ಯ ಇಲ್ಲಿ ಹೇಳುತ್ತಾ ಹೋಗಿದ್ದಾರೆ. ಅಂಥ ವ್ಯಕ್ತಿತ್ವ ಪ್ರಮುಖ ಅಂಶವೆಂದರೆ, ಬೇರೆಯವರ ಹೇಳುವುದನ್ನು ಕೇಳಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿರಬೇಕು, you must be a good listener ಎಂದು ಅವರು ಹೇಳುತ್ತಾರೆ. ಆಗಲೇ ಜನ ನಮ್ಮನ್ನು ಇಷ್ಟಪಟ್ಟು ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳಲು ಮುಂದಾಗುತ್ತಾರೆ.

ನಮ್ಮ ಬಗ್ಗೆ ನಾವು ಕೊಚ್ಚಿಕೊಳ್ಳುತ್ತಿದ್ದರೆ ಜನಕ್ಕೆ ಖಂಡಿತವಾಗಿಯೂ ಇಷ್ಟಪಡುವುದಿಲ್ಲ ಬೇರೆಯವರು ನಮ್ಮನ್ನು ಹೊಗಳಬೇಕು, self praise has no recommendation ಎಂದು ಸೌಜನ್ಯ ಹೇಳುತ್ತಾರೆ. ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು ಆದರೆ ಅದು ಅತಿಯಾಗಿರಬಾರದು ಎಂದು ಡಾ ಸೌಜನ್ಯ ಹೇಳುತ್ತಾರೆ.

ನಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು, ಓದುವ ಹವ್ಯಾಸ ಬೆಳೆಸಿಕೊಂಡು ನಮ್ಮ ನಾಲೆಜ್ ವಿಸ್ತರಿಸಿಕೊಳ್ಳಬೇಕು, ನಮ್ಮಿಂದ ಬೇರೆಯವರಿಗೆ ಉಪಯೋಗವಾಗುವಂಥ ವ್ಯಕ್ತಿತ್ವ ನಮ್ಮದಾಗಿರಬೇಕು ಎಂದು ಅವರು ಹೇಳುತ್ತಾರೆ.

ಬೇರೆಯವರ ಬಗ್ಗೆ ಟೀಕೆ, ನೆಗೆಟಿವ್ ಕಾಮೆಂಟ್​ ಮಾಡುವ ಪ್ರವೃತ್ತಿ ನಮ್ಮಲ್ಲಿರಬಾರದು. ಬೇರೆಯವರ ಬಗ್ಗೆ ದೂರುವುದು, ಹೀಯಾಳಿಸಿ ಮಾತಾಡುವುದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ನೀಡುವುದಿಲ್ಲ. ಹಾಗೆಯೇ ನಮ್ಮ ಮಾತು ಮತ್ತು ವರ್ತನೆಯಿಂದ ಬೇರೆಯವರಿಗೆ ಇರುಸುಮುರುಸು, ಅವಮಾನ, ನೋವು ಆಗುವಂತೆ ಮಾಡಬಾರದು. ಮೂರನೇಯವರ ಮೇಲೆ ಜೋಕ್​ ಕಟ್​ ಮಾಡುವ ಬದಲು ನಮ್ಮ ಬಗ್ಗೆ ನಾವೇ ತಮಾಷೆ ಮಾಡಿಕೊಳ್ಳಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.

ನಾವು ಆರೋಗ್ಯವಂತರಾಗಿರುವುದು ಸಹ ಬಹಳ ಮುಖ್ಯ. ನಿಯಮಿತವಾಗಿ ವ್ಯಾಯಾಮ, ವಾಕ್​ ಮಾಡುವ ಅಭ್ಯಾಸ ನಮ್ಮಲ್ಲಿರಬೇಕು. ನಾವು ಆರೋಗ್ಯದ ಬಗ್ಗೆ ಕಾಳಜಿವಹಿಸೋದು ಬೇರೆಯವರಿಗೆ ಇಷ್ಟವಾಗುತ್ತದೆ ಮತ್ತು ಅವರು ನಮ್ಮನ್ನು ಅನುಕರಿಸುವ ಪ್ರಯತ್ನ ಮಾಡುತ್ತಾರೆ.

ಸಿಡುಕುತನ ಒಳ್ಳೆಯ ಅಭಿಪ್ರಾಯ ಹುಟ್ಟಿಸುವುದಿಲ್ಲ, ಮುಖದಲ್ಲಿ ಯಾವಾಗಲೂ ಮುಗುಳ್ನಗೆ, ಮಂದಹಾಸ ಇರಬೇಕು ಎಂದು ಹೇಳುವ ಡಾ ಸೌಜನ್ಯ ನಮ್ಮಲ್ಲಿರುವ ಎಲ್ಲ ಗುಣಗಳಿಗೆ ದೇವರಿಗೆ ಕೃತಜ್ಞತೆ ಉಳ್ಳವರಾಗಿರಬೇಕು ಅನ್ನುತ್ತಾರೆ.

ಇದನ್ನೂ ಓದಿ: ಒತ್ತಡವನ್ನು ನಿಯಂತ್ರಿಸಿ ನೆಮ್ಮದಿಯ ಮತ್ತು ಸುಖಮಯ ಬದುಕು ನಡೆಸುವುದು ಹೇಗೆ ಅನ್ನೋದನ್ನು ಡಾ ಸೌಜನ್ಯ ವಶಿಷ್ಠ ವಿವರಿಸುತ್ತಾರೆ

Follow us on

Click on your DTH Provider to Add TV9 Kannada