ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಎಚ್ಚರಿಕೆ ಕೊಟ್ಟ ಕೈ ಶಾಸಕನ ವಿಡಿಯೋ ವೈರಲ್

Edited By:

Updated on: Dec 25, 2025 | 5:37 PM

ಮಾಗಡಿ ಕಾಂಗ್ರೆಸ್ ಶಾಸಕ ಶಾಸಕ ಬಾಲಕೃಷ್ಣ ಅವರು ತಹಶೀಲ್ದಾರ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.ಮಾಗಡಿ ತಾಲೂಕು ಪಂಚಾಯಿತಿಯಲ್ಲಿಂದು ಜನರ ಕುಂದುಕೊರತೆ ಆಲಿಸುವ ಸಭೆಯಲ್ಲಿ ತಹಶೀಲ್ದಾರ್ ಡಿ.ಪಿ.ಶರತ್ ಕುಮಾರ್ ಆಕ್ರೋಶಗೊಂಡಿದ್ದು, ಸರಿಯಾಗಿ ಕೆಲಸಮಾಡಿ. ಇಲ್ಲವಾದರೆ ಚಪ್ಪಲಿಯಲ್ಲಿ ಹೊಡೆಸುವೆ ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ. ಜನರನ್ನು ಯಾಕೆ ಕಚೇರಿಗೆ ಅಲೆಸಿ ಸಾಯಿಸುತ್ತೀರಾ. ಯುವ ಅಧಿಕಾರಿಗಳು ಹೇಗೆ ಇರಬೇಕು. ತಹಶೀಲ್ದಾರ್ ಆದವನು ಶಾಸಕ ಕೂಡ ಆಗಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಮೃತಪಟ್ಟಾಗ ಜನ ಕಣ್ಣೀರಿಟ್ಟರು. ನಿಮಗೆ ಜನ ಅಳುತ್ತಾರಾ, ತೊಲಗಿ ಎಂದು ಶಾಪ ಹಾಕುತ್ತಾರೆ ಎಂದು ಕಿಡಿಕಾರಿದರು.

ರಾಮನಗರ, (ಡಿಸೆಂಬರ್ 25): ಮಾಗಡಿ (Magadi) ಕಾಂಗ್ರೆಸ್ ಶಾಸಕ ಶಾಸಕ ಹೆಚ್​​​ಸಿ ಬಾಲಕೃಷ್ಣ (MLA HC Balakrishna) ಅವರು ತಹಶೀಲ್ದಾರ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.ಮಾಗಡಿ ತಾಲೂಕು ಪಂಚಾಯಿತಿಯಲ್ಲಿಂದು ಜನರ ಕುಂದುಕೊರತೆ ಆಲಿಸುವ ಸಭೆಯಲ್ಲಿ ತಹಶೀಲ್ದಾರ್ ಡಿ.ಪಿ.ಶರತ್ ಕುಮಾರ್ ಆಕ್ರೋಶಗೊಂಡಿದ್ದು, ಸರಿಯಾಗಿ ಕೆಲಸಮಾಡಿ. ಇಲ್ಲವಾದರೆ ಚಪ್ಪಲಿಯಲ್ಲಿ ಹೊಡೆಸುವೆ ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ.

ಯಾವ ಅಧಿಕಾರಿ ಸರಿಯಾಗಿ ಕೆಲಸ ಮಾಡಲ್ಲ ಹೆಸರು ಬರೆಯಿರಿ. ತಿಂಗಳಿಗೆ ಒಮ್ಮೆ ಕಂಪ್ಲೆಂಟ್ ಬಾಕ್ಸ್ ಓಪನ್ ಮಾಡೋಣ. ನಾನು ಉಪ ವಿಭಾಗಾಧಿಕಾರಿ ಕರೆಸುತ್ತೇನೆ. ಆಗ ಜನರಿಗೆ ಉತ್ತರ ಹೇಳಿ. ಸರಿಯಾಗಿ ಕೆಲಸಮಾಡಿ, ಇಲ್ಲವಾದರೆ ಚಪ್ಪಲಿಯಲ್ಲಿ ಹೊಡೆಸುವೆ. ನನ್ನ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ರೂ ಸರಿ. ಜನ ಚಪ್ಪಲಿ ತಗೊಂಡೆ ನನಗೆ ಅಥನಾ ನಿನಗೆ ಹೊಡೆಯುತ್ತಾರೆ. ನಿನ್ನ ಕೈಯಲ್ಲಿ ಕೆಲಸ ಮಾಡಿಸಲು ಆಗಲ್ಲವೆಂದ್ರೆ ನನಗೆ ಹೊಡೆಯುತ್ತಾರೆ. ನೀನು ಏನು ಕೆಲಸ ಮಾಡದಿದ್ದರೆ ಜನ ನಿನಗೆ ಹೊಡೆಯುತ್ತಾರೆ. ಮಾತನಾಡದೆ ನಿಮಗೆ ಮುತ್ತಿಕ್ಕುತ್ತಾರಾ? ನಾಚಿಕೆ ಆಗಲ್ವಾ ನಿಮಗೆ ಎಂದು ತರಾಟಗೆ ತೆಗೆದುಕೊಂಡರು.

ಜನರನ್ನು ಯಾಕೆ ಕಚೇರಿಗೆ ಅಲೆಸಿ ಸಾಯಿಸುತ್ತೀರಾ. ಯುವ ಅಧಿಕಾರಿಗಳು ಹೇಗೆ ಇರಬೇಕು. ತಹಶೀಲ್ದಾರ್ ಆದವನು ಶಾಸಕ ಕೂಡ ಆಗಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಮೃತಪಟ್ಟಾಗ ಜನ ಕಣ್ಣೀರಿಟ್ಟರು. ನಿಮಗೆ ಜನ ಅಳುತ್ತಾರಾ, ತೊಲಗಿ ಎಂದು ಶಾಪ ಹಾಕುತ್ತಾರೆ ಎಂದು ಕಿಡಿಕಾರಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published on: Dec 25, 2025 05:35 PM