ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಯಲಹಂಕದ ದೊಂಬರಹಳ್ಳಿಯಲ್ಲಿ ಸರ್ಕಾರಿ ಶಾಲೆಯ 50 ಮೀಟರ್ ದೂರದಲ್ಲೇ CL-7 ಬಾರ್‌ಗೆ ಅಬಕಾರಿ ಉಪ ಆಯುಕ್ತ ಮುರಳಿ ಲೈಸೆನ್ಸ್ ನೀಡಿದ್ದಾರೆ ಎಂದು ಟಿವಿ9 ಸಾಕ್ಷ್ಯ ಸಮೇತ ವರದಿ ಮಾಡಿದೆ. ನಿಯಮಾವಳಿಗಳ ಪ್ರಕಾರ ಶಾಲಾ ಆವರಣದಿಂದ 100 ಮೀಟರ್ ಒಳಗೆ ಮದ್ಯದಂಗಡಿ ಇರಬಾರದು. ಕಳೆದ ಎರಡು ವರ್ಷಗಳಲ್ಲಿ 60ಕ್ಕೂ ಹೆಚ್ಚು ಅನಧಿಕೃತ CL-7 ಲೈಸೆನ್ಸ್‌ಗಳನ್ನು ನೀಡಿದ ಆರೋಪ ಮುರಳಿ ಅವರ ಮೇಲಿದೆ.
ಬೆಂಗಳೂರು, ಫೆಬ್ರವರಿ 04: ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ 50 ಮೀಟರ್ ದೂರದಲ್ಲೇ ಸಿಂಹಾದ್ರಿ ಬೋರ್ಡಿಂಗ್, ಲಾಡ್ಜಿಂಗ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಅನುವತಿ ನೀಡಲಾಗಿದೆ. ಈ ಬಗ್ಗೆ ಟಿವಿ9 ಗ್ರೌಂಡ್ ರಿಪೋರ್ಟ್ ಮೂಲಕ ಸಾಕ್ಷಿ ಸಮೇತ ಅಬಕಾರಿ ಇಲಾಖೆಯ ಕಳ್ಳಾಟ ಬಯಲು ಮಾಡಿದೆ. ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಮದ್ಯದಂಗಡಿಗಳಿಗೆ ಪರವಾನಗಿ ನೀಡುವಂತಿಲ್ಲ ಎಂಬ ನಿಯಮವಿದ್ದರೂ, ಅಬಕಾರಿ ಉಪ ಆಯುಕ್ತ ಮುರಳಿ ನಿಯಮವನ್ನು ಉಲ್ಲಂಘಿಸಿ ಲೈಸೆನ್ಸ್ ನೀಡಿರುವ ಆರೋಪ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 04, 2026 04:25 PM
Latest Videos
