ಕೋಳಿಯ ಹೊಟ್ಟೆಯಲ್ಲಿ ಕಬ್ಬಿಣದ ಚೂರು ಹೋಗಬಹುದು, ಮೊಟ್ಟೆಯಲ್ಲಿ ಹೇಗೆ ಹೋಗಿರಲು ಸಾಧ್ಯ?
ಕಾರ್ಯಪ್ಪ ಮೊಟ್ಟೆ ಸುಲಿದು ತುಂಡು ಮಾಡುವಾಗ ಅವರಿಗೆ ಅದರಲ್ಲಿ ಈ ಕಬ್ಬಿಣದ ಚೂರು ಸಿಕ್ಕಿದೆ! ಇದು ನಿಜಕ್ಕೂ ಆಶ್ಚರ್ಯ. ಕಬ್ಬಿಣದ ಚೂರು ಕೋಳಿಯ ಹೊಟ್ಟೆಯೊಳಗೆ ಹೋಗುವ ಸಾಧ್ಯತೆಯಿದೆ, ಅದರೆ ಮೊಟ್ಟೆಯೊಳಗೆ?
ಒಬ್ಬ ವ್ಯಕ್ತಿಯಲ್ಲಿ ಅದು ಮಹಿಳೆಯಾಗಿರಬಹುದು ಅಥವಾ ಪುರುಷ; ರಕ್ತಹೀನತೆ ಮತ್ತು ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಕಂಡರೆ ವೈದ್ಯರು ನಿಯಮಿಯವಾಗಿ ಮೊಟ್ಟೆ ತಿನ್ನಿ ಅದರಲ್ಲಿ ಕಬ್ಬಿಣಾಂಶ ಇರುತ್ತದೆ ಎಂದು ಹೇಳುತ್ತಾರೆ. ಒಂದು ಕುದಿಸಿದ ಮೊಟ್ಟೆಯಲ್ಲಿ 1.2 ಮಿಲಿ ಗ್ರಾಂ ಕಬ್ಬಿಣಾಂಶ ಇರುತ್ತದೆ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಇದನ್ನೆಲ್ಲ ನಾವು ಕೇಳಿಸಿಕೊಂಡಿದ್ದೇವೆ. ಆದರೆ ಮೊಟ್ಟೆಯಲ್ಲಿ ಕಬ್ಬಿಣದ ಅಂಶ ಹಾಗಿರಲಿ ಕಬ್ಬಿಣದ ಚೂರೇ ಸಿಕ್ಕುಬಿಟ್ಟರೆ ಹೇಗೆ? ಇದು ತಮಾಷೆ ಅನ್ನಿಸಬಹುದಾದರೂ ವಾಸ್ತವದಲ್ಲಿ ನಡೆದಿರುವ ಸಂಗತಿ.
ಇಲ್ಲಿರುವ ವಿಡಿಯೋ ನೋಡಿ. ಇದು ಕೊಡಗಿನ ಸೋಮವರಪೇಟೆ ತಾಲ್ಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿರುವ ಮಂಡೀರ್ ಕಾರ್ಯಪ್ಪನವರ ಮನೆ. ಕಾರ್ಯಪ್ಪ ಕುದಿಸಿದ ಮೊಟ್ಟೆ ಮೇಲಿನ ತೊಗಟೆಯನ್ನು ತೆಗೆಯುತ್ತಿದ್ದಾರೆ. ಒಂದು ಪಾತ್ರೆಯಲ್ಲಿ ನೀರಿದ್ದು ಅದರಲ್ಲಿ ಎರಡು ಕುದುಸಿದ ಮೊಟ್ಟೆಗಳಿವೆ. ಮೊದಲನೇ ಮೊಟ್ಟೆಯ ಸಿಪ್ಪೆಯನ್ನು ಅವರು ಸುಲಿಯುತ್ತಾರೆ. ನಂತರ ಅದನ್ನು ನಾಲ್ಕು ಭಾಗಗಳಲ್ಲಿ ತುಂಡು ಮಾಡಿ ತೋರಿಸುತ್ತಾರೆ. ಅದರಲ್ಲಿ ವಿಶೇಷವೇನೂ ಇಲ್ಲ ಅದು ಮಾಮೂಲಿ ಮೊಟ್ಟೆಯಂತೆಯೇ ಇದೆ. ಬಳಿಕ ಅವರು ಎರಡನೇ ಮೊಟ್ಟೆಯ ತೊಗಟೆ ತೆಗೆಯಲಾರಂಭಿಸುತ್ತಾರೆ.
ಆದರೆ, ಮೊದಲ ಮೊಟ್ಟೆಯ ಹಾಗೆ ಇದು ಸುಲಭವಾಗಿ ಸುಲಿದುಕೊಳ್ಳುವುದಿಲ್ಲ. ಸುಲಿಯುವಾಗಲೇ ಬಿಚ್ಚಿಕೊಳ್ಳಲಾರಂಭಿಸುತ್ತದೆ.
ಓಕೆ, ಕಾರ್ಯಪ್ಪ ಎರಡನೇ ಮೊಟ್ಟೆ ಸುಲಿದು ತುಂಡು ಮಾಡುವಾಗ ಅವರಿಗೆ ಅದರಲ್ಲಿ ಈ ಕಬ್ಬಿಣದ ಚೂರು ಸಿಕ್ಕಿದೆ! ಇದು ನಿಜಕ್ಕೂ ಆಶ್ಚರ್ಯ. ಕಬ್ಬಿಣದ ಚೂರು ಕೋಳಿಯ ಹೊಟ್ಟೆಯೊಳಗೆ ಹೋಗುವ ಸಾಧ್ಯತೆಯಿದೆ, ಅದರೆ ಮೊಟ್ಟೆಯೊಳಗೆ?
ಈ ವಿಡಿಯೋದ ಮತ್ತೊಂದು ಸೂಕ್ಷ್ಮವನ್ನು ನೀವು ಗಮನಿಸಿ. ಕಾರ್ಯಪ್ಪನವರಿಗೆ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಇದ್ದಿದ್ದು ಮೊದಲೇ ಗೊತ್ತಿದ್ದಂತೆ ಭಾಸವಾಗುತ್ತದೆ. ಹಾಗಿಲ್ಲದೆ ಹೋದರೆ, ಮೊಟ್ಟೆ ಸುಲಿಯುವುದನ್ನು ಯಾರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಾರೆ?
ದಾಲ್ ಮೆ ಕುಚ್ ಕಾಲಾ ಹೈ ಅನ್ನುವ ಹಾಗೆ ಅಂಡೆ ಮೇ ಲೋಹೆ ಕಾ ತುಕಡಾ ಹೈ ಅಂತ ಅವರಿಗೆ ಮೊದಲೇ ಗೊತ್ತಿತ್ತೇ?
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ನಿಂತಿದ್ದ ಯುವತಿಯ ಪ್ರಾಣ ಕಾಪಾಡಿದ ಆಟೋ ಚಾಲಕ; ವಿಡಿಯೋ ವೈರಲ್