ವಿವೊ ಎಕ್ಸ್70 ಪ್ರೊ ಮತ್ತು ಪ್ರೊ+ ವಾರದಲ್ಲಿ ಲಭ್ಯವಾಗಲಿವೆ ಅದರೆ, ವೆನಿಲ ಎಕ್ಸ್ 70 ಮಾಯವಾಗುತ್ತಿದೆ

ಎರಡೂ ಸ್ಮಾರ್ಟ್ಫೋನ್​ಗಳು ವಿವೊ ಭಾರತದ ಇ-ಸ್ಟೋರ್, ಫ್ಲಿಪ್ ಕಾರ್ಟ್ ಮತ್ತು ಭಾರತದೆಲ್ಲೆಡೆ ಕಂಪನಿಯ ಆಫ್ ಲೈನ್ ರಿಟೇಲ್ ಪಾರ್ಟ್​ನರ್​​ಗಳ ಅಂಗಡಿಗಳಲ್ಲಿ ಸಿಗಲಿವೆ.

ವಿವೊ ಐಪಿಎಲ್ ಕೊನೆಯ ಹಂತ ತಲುಪಿರುವ ಸಂದರ್ಭದಲ್ಲೇ ಚೀನಾದ ಸ್ಮಾರ್ಟ್ ಫೋನ್ ಉತ್ಪಾದಕ ಕಂಪನಿ ವಿವೊ ತನ್ನ ಎಕ್ಸ್70 ಸರಣಿಯ ಎರಡು ಫೋನ್ಗಳನ್ನು-ವಿವೊ ಎಕ್ಸ್70 ಪ್ರೊ ಮತ್ತು ವಿವೊ ಎಕ್ಸ್70 ಪ್ರೊ+ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದರೆ ಬೇಸರ ಮೂಡಿಸುವ ಸಂಗತಿಯೆಂದರೆ, ಸಂಸ್ಥೆಯು ತನ್ನ ವೆನಿಲ ಎಕ್ಸ್ 70 ಮಾಡೆಲ್ ಅನ್ನು ಭಾರತದ ಮಾರ್ಕೆಟ್ ನಿಂದ ಹಿಂತೆಗೆದುಕೊಂಡಿದೆ. ವಿವೊ ಎಕ್ಸ್70 ಪ್ರೊ ಅಕ್ಟೋಬರ್ 7 ರಿಂದ ಭಾರತದಲ್ಲಿ ಲಭ್ಯವಾಗಲಿದ್ದರೆ ವಿವೊ ಎಕ್ಸ್70 ಪ್ರೊ+ ಅಕ್ಟೋಬರ್ 12 ರಿಂದ ಗ್ರಾಹಕರಿಗೆ ಸಿಗಲಿದೆ.

ಎರಡೂ ಸ್ಮಾರ್ಟ್ಫೋನ್​ಗಳು ವಿವೊ ಭಾರತದ ಇ-ಸ್ಟೋರ್, ಫ್ಲಿಪ್ ಕಾರ್ಟ್ ಮತ್ತು ಭಾರತದೆಲ್ಲೆಡೆ ಕಂಪನಿಯ ಆಫ್ ಲೈನ್ ರಿಟೇಲ್ ಪಾರ್ಟ್​ನರ್​​ಗಳ ಅಂಗಡಿಗಳಲ್ಲಿ ಸಿಗಲಿವೆ. ವಿವೊ ಎಕ್ಸ್70 ಪ್ರೊ ಔರೊರ ಡಾನ್ ಮತ್ತು ಕಾಸ್ಮಿಕ್ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ವಿವೊ ಎಕ್ಸ್70 ಪ್ರೊ+ ಎನಿಗ್ಮಾ ಕಪ್ಪು ಬಣ್ಣದಲ್ಲಿ ಸಿಗಲಿದೆ.

ವಿವೊ ಎಕ್ಸ್70 ಪ್ರೊ ಮೂಲ 8 ಜಿಬಿ/ 128 ಜಿಬಿಯ ಬೆಲೆ ರೂ 46,990 ಅಗಿದ್ದು ದ್ವಿಗುಣ ಸಾಮರ್ಥ್ಯದ ಸ್ಟೋರೇಜ್ ನಿಮಗೆ ಬೇಕಿದ್ದರೆ (256 ಜಿಬಿ) ಅದರ ಬೆಲೆ ರೂ 49,990 ಆಗುತ್ತದೆ. ವಿವೊ ಎಕ್ಸ್70 12 ಜಿಬಿ/ 256 ಜಿಬಿ ಟಾಪ್-ಎಂಡ್ ಮಾಡೆಲ್ ಬೆಲೆ ರೂ. 52,990 ಆಗುತ್ತದೆ. ವಿವೊ ಎಕ್ಸ್70 ಪ್ರೊ+ ಬೆಲೆ 79,990 ಆಗಿದ್ದು ಕೇವಲ 12 ಜಿಬಿ/ 256 ಜಿಬಿ ಕಾನ್ಫಿಗರೇಶನ್ ನಲ್ಲಿ ಮಾತ್ರ ಸಿಗುತ್ತದೆ.

ಇದನ್ನೂ ಓದಿ:  Navjot Singh Sidhu ನೈತಿಕತೆಯೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ನವಜೋತ್ ಸಿಂಗ್ ಸಿಧು

Click on your DTH Provider to Add TV9 Kannada