ವಿಕಲಚೇತನ ಬಿಜೆಪಿ ಕಾರ್ಯಕರ್ತನ ಉತ್ಸಾಹಕ್ಕೆ ಶಹಬಾಷ್ ಗಿರಿ ನೀಡಿದ ಪ್ರಧಾನಿ ಮೋದಿ

|

Updated on: May 06, 2023 | 11:06 PM

ಹೊರವಲಯದ ಅಜ್ಜಯ್ಯನ ದೇಗುಲ ಬಳಿಯ ಹೆಲಿಪ್ಯಾಡ್​​ಗೆ ವ್ಹೀಲ್​ಚೇರ್​ನಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತ ಹನುಮಂತಪ್ಪ ದಾಸರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.

ಹಾವೇರಿ: ಹೊರವಲಯದ ಅಜ್ಜಯ್ಯನ ದೇಗುಲ ಬಳಿಯ ಹೆಲಿಪ್ಯಾಡ್​​ಗೆ ವ್ಹೀಲ್​ಚೇರ್​ನಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತ ಹನುಮಂತಪ್ಪ ದಾಸರನ್ನು (Hanumanthappa Dasara) ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ. ಬಿಜೆಪಿ ಚುನಾವಣಾ ಸಮಾವೇಶ ಮುಗಿಸಿ ತೆರಳುತ್ತಿದ್ದ ವೇಳೆ ಭೇಟಿ ಮಾಡಿದ್ದು, ದಿವ್ಯಾಂಗ ಹನುಮಂತಪ್ಪ ದಾಸರ ಯೋಗಕ್ಷೇಮವನ್ನು ಮೋದಿ ವಿಚಾರಿಸಿದ್ದಾರೆ. ಹನುಮಂತಪ್ಪ ದಾಸರ ಹಾವೇರಿ ತಾಲೂಕಿನ ಅಗಡಿ ಗ್ರಾಮದ ನಿವಾಸಿ. ಬೂತ್ ಪ್ರಮುಖನಾಗಿರುವ ಹನುಮಂತಪ್ಪ ಹುಟ್ಟು ದಿವ್ಯಾಂಗರಾಗಿದ್ದಾರೆ. ಬಳಿಕ ಮಾತನಾಡಿರುವ  ಅವರು ಪ್ರಧಾನಿ ಮೋದಿಯವರನ್ನು ಭೇಟಿ ಆಗೋದು ನನ್ನ ಜೀವಮಾನದ ಕನಸಾಗಿತ್ತು. ಮೋದಿಯವರ ಭೇಟಿಗೆ ಸಾಕಷ್ಟು ವರ್ಷಗಳಿಂದ ಹಂಬಲಿಸುತ್ತಿದೆ. ಅವರನ್ನ ಭೇಟಿ ಮಾಡಿರೋದು ದೇವರ ದರ್ಶನ ಮಾಡಿದಷ್ಟೇ ಖುಷಿಯಾಗಿದೆ. ಮೋದಿಯವರು ನಾನು ಅಂಗವಿಕಲನಾಗಿದ್ರು ಬೂತಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವುದಕ್ಕೆ ಶಹಬಾಷ್ ಗಿರಿ ನೀಡಿದರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 06, 2023 11:06 PM