Loading video

ಮಾರಿಷಸ್ ಅಧ್ಯಕ್ಷರ ಪತ್ನಿಗೆ ಬನಾರಸಿ ಸೀರೆ ಕೊಟ್ಟ ಪ್ರಧಾನಿ ಮೋದಿ

|

Updated on: Mar 11, 2025 | 6:59 PM

ಇಂದು (ಮಂಗಳವಾರ) ಎರಡು ದಿನಗಳ ಭೇಟಿಗಾಗಿ ಮಾರಿಷಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಪೋರ್ಟ್ ಲೂಯಿಸ್‌ನಲ್ಲಿ ಮಾರಿಷಸ್ ಅಧ್ಯಕ್ಷ ಧರಂಬೀರ್ ಗೋಖೂಲ್ ಮತ್ತು ಪ್ರಥಮ ಮಹಿಳೆ ವೃಂದಾ ಗೋಖೂಲ್ ಅವರನ್ನು ಭೇಟಿಯಾದರು. ತಮ್ಮ ಎರಡು ದಿನಗಳ ರಾಜ್ಯ ಭೇಟಿಯ ಎರಡನೇ ಮತ್ತು ಕೊನೆಯ ದಿನವಾದ ಬುಧವಾರ ಪ್ರಧಾನಿ ಮೋದಿ ಮಾರಿಷಸ್‌ನ 57ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ವಾರಾಣಸಿ, (ಮಾರ್ಚ್ 11): ವಾರಾಣಸಿ ಮೂಲದ ಬನಾರಸಿ ಸೀರೆಯು ಐಷಾರಾಮಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಅದರ ಸೂಕ್ಷ್ಮ ರೇಷ್ಮೆ, ಸಂಕೀರ್ಣವಾದ ಬ್ರೊಕೇಡ್‌ಗಳು ಮತ್ತು ಅತ್ಯುತ್ತಮವಾದ ಜರಿ ಕೆಲಸಗಳಿಗೆ ಹೆಸರುವಾಸಿಯಾಗಿದೆ. ಈ ಸೊಗಸಾದ ಸೀರೆಯು ರಾಯಲ್ ನೀಲಿ ಬಣ್ಣದಲ್ಲಿದೆ. ಬೆಳ್ಳಿ ಜರಿ, ಅಗಲವಾದ ಜರಿ ಮತ್ತು ಸಮೃದ್ಧವಾದ ಅಗಲವಾದ ಸೆರಗಿನಿಂದ ಅಲಂಕರಿಸಲ್ಪಟ್ಟಿದೆ. ಇದು ಮದುವೆಗಳು, ಹಬ್ಬಗಳು ಮತ್ತು ಭವ್ಯ ಆಚರಣೆಗಳಿಗೆ ಸೂಕ್ತವಾಗಿದೆ. ಈ ಸೀರೆಯನ್ನು ಗುಜರಾತ್‌ನ ಸದೇಲಿ ಬಾಕ್ಸ್ ಒಳಗಿಟ್ಟು ಮಾರಿಷಸ್ ಅಧ್ಯಕ್ಷರ ಪತ್ನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆ ನೀಡಿದ್ದಾರೆ. ಇದು ಅಮೂಲ್ಯವಾದ ಸೀರೆಗಳು, ಆಭರಣಗಳು ಅಥವಾ ಸ್ಮರಣಿಕೆಗಳನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾದ ಸಂಕೀರ್ಣವಾದ ಕೆತ್ತಿದ ಕೆಲಸವನ್ನು ಒಳಗೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 11, 2025 06:18 PM