Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದ ಹಿಂದೆ ಸಾತ್ವಿಕ್​ನನ್ನು ಕೊಳವೆ ಬಾವಿಯಿಂದ ಜೀವಂತ ಹೊರತೆಗೆದ ತಂಡಕ್ಕೆ ಇನ್ನೂ ಹಣ ಸಿಕ್ಕಿಲ್ಲ!

ವರ್ಷದ ಹಿಂದೆ ಸಾತ್ವಿಕ್​ನನ್ನು ಕೊಳವೆ ಬಾವಿಯಿಂದ ಜೀವಂತ ಹೊರತೆಗೆದ ತಂಡಕ್ಕೆ ಇನ್ನೂ ಹಣ ಸಿಕ್ಕಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 11, 2025 | 4:55 PM

ಈ ಪ್ರಕರಣ ಮತ್ತೊಂದು ಭಾಗವೆಂದರೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಯಂತ್ರೋಪಕರಣ, ವಾಹನ ಮತ್ತು ಜನರಿಗೆ ವಿಜಯಪುರ ಜಿಲ್ಲಾಡಳಿತ ಇದುವರೆಗೆ ಹಣ ಪಾವತಿಸಿಲ್ಲ. ಕಳೆದ ಒಂದು ವರ್ಷದಿಂದ ಜನ ಡಿಸಿ ಕಚೇರಿಗೆ ಅಲೆದಾಡುತ್ತಿದ್ದಾರೆ, ಯಾವುದೋ ಒಂದು ಸಬೂಬು ಹೇಳಿ ಅವರನ್ನು ವಾಪಸ್ಸು ಕಳಿಸಲಾಗುತ್ತದಂತೆ. ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ನಿದ್ರೆಯಲ್ಲಿರುವಂತಿದೆ.

ವಿಜಯಪುರ, ಮಾರ್ಚ್ 11: ನಿಮಗೆ ನೆನಪಿರಬಹುದು, ಕಳೆದ ವರ್ಷ ಏಪ್ರಿಲ್ 3ರಂದು ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಕೊಳವೆ ಬಾವಿಯೊಂದರಲ್ಲಿ ಒಂದೂವರೆ ವರ್ಷದ ಸಾತ್ವಿಕ್ ಹೆಸರಿನ ಮಗು ತಲೆಕೆಳಗಾಗಿ ಬಿದ್ದಿತ್ತು. ಪಕ್ಕದ ಕ್ವಾರಿಗಳಲ್ಲಿ ಕೆಲಸ ಮಾಡುತ್ತಿದ್ದ ಜನ ಜೆಸಿಬಿ, ಹಿಟಾಚಿ ಮತ್ತು ಇತರ ಯಂತ್ರೋಪಕರಣಗಳೊಂದಿಗೆ ನೆರವಿಗೆ ಧಾವಿಸಿದ್ದರು. 22 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ  (rescue operation) ಮಗುವನ್ನು ರಕ್ಷಿಸಲಾಗಿತ್ತು. ಬಹಳ ಅಪರೂಪದ ಪ್ರಕರಣ ಅದು, ಯಾಕೆಂದರೆ ಕೊಳವೆ ಬಾವಿಗೆ ಬೀಳುವ ಮಕ್ಕಳು ಬದುಕುಳಿದಿರುವುದು ವಿರಳ ಸಂದರ್ಭಗಳಲ್ಲಿ ಮಾತ್ರ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸುಮಾರು 21-ಗಂಟೆ ಕಾರ್ಯಚರಣೆ ನಂತರ ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರತಂದ ಎನ್ ಡಿಆರ್ ಎಫ್ ತಂಡದ ಸಾಹಸ ವರ್ಣನೆಗೆ ನಿಲುಕದ್ದು!