Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮಾರು 21-ಗಂಟೆ ಕಾರ್ಯಚರಣೆ ನಂತರ ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರತಂದ ಎನ್ ಡಿಆರ್ ಎಫ್ ತಂಡದ ಸಾಹಸ ವರ್ಣನೆಗೆ ನಿಲುಕದ್ದು!

ಸುಮಾರು 21-ಗಂಟೆ ಕಾರ್ಯಚರಣೆ ನಂತರ ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರತಂದ ಎನ್ ಡಿಆರ್ ಎಫ್ ತಂಡದ ಸಾಹಸ ವರ್ಣನೆಗೆ ನಿಲುಕದ್ದು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 04, 2024 | 2:44 PM

ಆದಷ್ಟು ಬೇಗ ಮಗುವನ್ನು ಸುರಕ್ಷಿತವಾಗಿ ಹೊರತರಲಿ ಎಂದು ಕನ್ನಡಿಗರೆಲ್ಲ ಪ್ರಾರ್ಥಿಸುತ್ತಿದ್ದರು. ಎನ್ ಡಿಆರ್ ಎಫ್ ಪ್ರದರ್ಶಿಸಿರುವ ಸಾಹಸ, ಸಮಯಪ್ರಜ್ಞೆ ಮತ್ತು ಸ್ಥಿತಪ್ರಜ್ಞತೆ ಎಷ್ಟು ಕೊಂಡಾಡಿದರೂ ಸಾಲದು. ಮಗುವನ್ನು ಸುರಕ್ಷಿತವಾಗಿ ಹೊರಗ ತಂದು ಮೇಲೆ ತರುತ್ತಿರುವ ರೋಚಕ ದೃಶ್ಯವನ್ನು ಇಲ್ಲಿ ನೋಡಬಹುದು.

ವಿಜಯಪುರ: ಕಳೆದ ಸುಮಾರು 21 ಗಂಟೆಗಳಿಂದ ಸಾತ್ವಿಕ್ ನ ರಕ್ಷಣಾ ಕಾರ್ಯಾಚಣೆ ತೊಡಗಿದ್ದ ಎನ್ ಡಿ ಅರ್ ಎಫ್ ತಂಡ ನಾವ್ಯಾರೂ ನೆನೆಸದ ರೀತಯಲ್ಲಿ ಯಶ ಸಾಧಿಸಿದೆ. ನಿನ್ನೆ ಸಾಯಂಕಾಲ ಕೊಳವೆ ಬಾವಿಯಲ್ಲಿ ಬಿದ್ದು ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ ಮಗುವನ್ನು ಅವರು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ನಾವು ಸತತವಾಗಿ ವರದಿ ಮಾಡುತ್ತಿರುವ ಹಾಗೆ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರರುವ ಲಚ್ಯಾಣ ಹೆಸರಿನ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸುಮಾರು 6 ಗಂಟೆಗೆ ಸಾತ್ವಿಕ್ ಹೆಸರಿನ 2-ವರ್ಷದ ಮಗು ಕೇವಲ ಒಂದು ದಿನದ ಹಿಂದಷ್ಟೇ ಕೊರೆಸಲಾಗಿದ ಕೊಳವೆ ಬಾವಿಯಲ್ಲಿ ಜಾರಿಬಿಟ್ಟಿತ್ತು. ಸತೀಶ್ ಮತ್ತು ಪೂಜಾ ಎನ್ನುವವರ ಮಗು ಸುಮಾರು 20 ಅಡಿ ಆಳದಲ್ಲಿ ಸಿಕ್ಹಾಕಿಕೊಂಡಿತ್ತು. ಆದಷ್ಟು ಬೇಗ ಮಗುವನ್ನು ಸುರಕ್ಷಿತವಾಗಿ ಹೊರತರಲಿ ಎಂದು ಕನ್ನಡಿಗರೆಲ್ಲ ಪ್ರಾರ್ಥಿಸುತ್ತಿದ್ದರು.

ಎನ್ ಡಿಆರ್ ಎಫ್ ಪ್ರದರ್ಶಿಸಿರುವ ಸಾಹಸ, ಸಮಯಪ್ರಜ್ಞೆ ಮತ್ತು ಸ್ಥಿತಪ್ರಜ್ಞತೆ ಎಷ್ಟು ಕೊಂಡಾಡಿದರೂ ಸಾಲದು. ಮಗುವನ್ನು ಸುರಕ್ಷಿತವಾಗಿ ಹೊರಗ ತಂದು ಮೇಲೆ ತರುತ್ತಿರುವ ರೋಚಕ ದೃಶ್ಯವನ್ನು ಇಲ್ಲಿ ನೋಡಬಹುದು. ನಿನ್ನೆಯಿಂದ ಒಂದು ಹನಿ ನೀರು ಬಾಯಿಗೆ ಹಾಕದೆ ರಕ್ಷಣಾ ಕಾರ್ಯಚರಣೆಯನ್ನು ದಿಗಿಲು, ಭಯ ಮತ್ತು ಆತಂಕದಿಂದ ನೋಡುತ್ತಿದ್ದ ಪೂಜಾ ಮತ್ತು ಸತೀಶ್ ದಂಪತಿಗೆ ಆಗಿರುವ ಸಂತೋಷವನ್ನು ಪದಗಳಲ್ಲಿ ಹೇಳುವುದು ಸಾಧ್ಯವೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೊಳವೆ ಬಾವಿಗೆ ಬಿದ್ದಿರುವ ಮಗು; ರಕ್ಷಣಾ ಕಾರ್ಯಾಚರಣೆಯ ಲೈವ್​ ಇಲ್ಲಿದೆ