ವಿಜಯಪುರ: ಸಾವು ಗೆದ್ದು ಬಂದ 2 ವರ್ಷದ ಸಾತ್ವಿಕ್ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಶಿಫ್ಟ್
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದ ಮಗು ಸಾತ್ವಿಕ 20 ಅಡಿಯ ಆಳದಲ್ಲಿ ಸಿಲುಕಿಕೊಂಡಿದ್ದ. ಸುದ್ದಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ NDRF ಮತ್ತು SDRF ಸಿಬ್ಬಂದಿಗಳ 22 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಸಾತ್ವಿಕ್ನನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯಪುರ, ಮಾರ್ಚ್ 04: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ 2 ವರ್ಷದ ಮಗು ಸಾತ್ವಿಕ್ (sathwik) ಮುಜುಗೊಂಡ ನಿನ್ನೆ ಜಮೀನಿನಲ್ಲಿ ಆಟವಾಡುತ್ತಿದ್ದಾಗ 500 ಅಡಿ ಆಳದ ತೆರೆೆದ ಕೊಳವೆ ಬಾವಿಗೆ ಬಿದ್ದುಬಿಟ್ಟಿದೆ. 20 ಅಡಿಯ ಆಳದಲ್ಲಿ ಮಗು ಸಿಲುಕಿಕೊಂಡಿತ್ತು. ಸುದ್ದಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿ ಎಂಡೋಸ್ಕೋಪ್ ಕ್ಯಾಮರಾದಲ್ಲಿ ಮಗು ಸಿಲುಕಿಕೊಂಡಿರುವ ಸ್ಥಳವನ್ನು ಗುರುತಿಸಲಾಯ್ತು. ಮಗುವಿನ ಕಾಲು ಕ್ಯಾಮರಾದಲ್ಲಿ ಗೋಚರವಾಗಿದೆ. ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡುವ ಮೂಲಕ 22 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಸಾತ್ವಿಕ್ನನ್ನು ಆ್ಯಂಬುಲೆನ್ಸ್ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಇಂಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.