20 ಗಂಟೆಗಳ ಕಾಲ ಅನ್ನ, ನೀರು ಇಲ್ಲದೆ ಕಗ್ಗತ್ತಲಲ್ಲಿದ್ದ ಸಾತ್ವಿಕ್ ಆರೋಗ್ಯ ಸ್ಥಿತಿ ಹೇಗಿದೆ? ಡಾಕ್ಟರ್ ಹೇಳಿದ್ದಿಷ್ಟು
ಕೊಳೆವೆ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪುಟ್ಟ ಕಂದ ಸಾತ್ವಿಕ್ ಸಾವು ಗೆದ್ದಿದ್ದಾನೆ. ಸಾತ್ವಿಕ್ ಸದ್ಯದ ಆರೋಗ್ಯ ಸ್ಥಿತಿ ಬಗ್ಗೆ ವಿಜಯಪುರ ಡಿಹೆಚ್ಒ ಡಾ.ಬಸವರಾಜ ಟಿವಿ9 ಜೊತೆ ಮಾತನಾಡಿದ್ದು, ಸಾತ್ವಿಕ್ ನಾರ್ಮಲ್ ಆಗಿದ್ದಾನೆ, ಯಾವುದೇ ಗಾಯವಾಗಿಲ್ಲ. ಇಂಡಿ ತಾಲೂಕು ಆಸ್ಪತ್ರೆಯಲ್ಲಿ ತಾಯಿ ಮಡಿಲಲ್ಲೇ ಮಲಗಿಸಿ ಸಾತ್ವಿಕ್ಗೆ ಚಿಕಿತ್ಸೆ ನೀಡುತ್ತಿದ್ದೇವೆ. ಸಿಟಿ ಸ್ಕ್ಯಾನ್ ಮಾಡಿಸಲು ವಿಜಯಪುರಕ್ಕೆ ಕರೆದೊಯುತ್ತೇವೆ ಎಂದಿದ್ದಾರೆ.
ವಿಜಯಪುರ, ಮಾರ್ಚ್ 04: ಕೊಳೆವೆ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪುಟ್ಟ ಕಂದ ಸಾತ್ವಿಕ್ (sathwik) ಸಾವು ಗೆದ್ದಿದ್ದಾನೆ. ನಿರಂತರ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಗೆ ಯಶಸ್ಸು ಸಿಕ್ಕಿದೆ. ಕಂದ ಇಲ್ದೆ ಕಂಗಾಲಾಗಿದ್ದ ಹೆತ್ತವರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಮಗುವಿನ ರಕ್ಷಣೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ರವಾಸಿಲಾಗಿತ್ತು. ಇದೀಗ ಸಾತ್ವಿಕ್ ಸದ್ಯದ ಆರೋಗ್ಯ ಸ್ಥಿತಿ ಬಗ್ಗೆ ವಿಜಯಪುರ ಡಿಹೆಚ್ಒ ಡಾ.ಬಸವರಾಜ ಟಿವಿ9 ಜೊತೆ ಮಾತನಾಡಿದ್ದು, ಸಾತ್ವಿಕ್ ನಾರ್ಮಲ್ ಆಗಿದ್ದಾನೆ, ಯಾವುದೇ ಗಾಯವಾಗಿಲ್ಲ. ಇಂಡಿ ತಾಲೂಕು ಆಸ್ಪತ್ರೆಯಲ್ಲಿ ತಾಯಿ ಮಡಿಲಲ್ಲೇ ಮಲಗಿಸಿ ಸಾತ್ವಿಕ್ಗೆ ಚಿಕಿತ್ಸೆ ನೀಡುತ್ತಿದ್ದೇವೆ. ಸಿಟಿ ಸ್ಕ್ಯಾನ್ ಮಾಡಿಸಲು ವಿಜಯಪುರಕ್ಕೆ ಕರೆದೊಯುತ್ತೇವೆ. ಜನರು ಜಾಗ ನೀಡಿದರೆ ಆದಷ್ಟು ಬೇಗ ಕರೆದೊಯ್ಯುತ್ತೇವೆ ಎಂದು ಹೇಳಿದ್ದಾರೆ. ಇಂಡಿ ತಾಲೂಕು ಆಸ್ಪತ್ರೆ ವೈದ್ಯ ಡಾ.ಈರಣ್ಣ ಪ್ರತಿಕ್ರಿಯಿಸಿದ್ದು, ನಮ್ಮ ವೈದ್ಯಕೀಯ ದಾಖಲೆ ಪ್ರಕಾರ ವಿರಳಾತಿವಿರಳ ಪ್ರಕರಣ ಇದು. ಲಚ್ಯಾಣ ಮುತ್ಯಾನ ಮತ್ತು ಸಿದ್ಧಲಿಂಗ ಮಹಾರಾಜರ ಮಹಿಮೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.