ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ; ದೆಹಲಿ-ವಾರಾಣಸಿ ಪ್ರಯಾಣ ಇನ್ಮುಂದೆ ಕೇವಲ ಮೂರೂವರೆ ಗಂಟೆ

Updated on: Oct 31, 2026 | 10:39 PM

"ಬುಲೆಟ್ ಟ್ರೈನ್ ಸೇವೆ ಕೇವಲ ಶ್ರೀಮಂತರಿಗಷ್ಟೇ ಸೀಮಿತ ಎಂಬ ತಪ್ಪು ಕಲ್ಪನೆಯನ್ನು ಕೆಲವರು ಹರಡಲು ಯತ್ನಿಸಬಹುದು. ಆದರೆ ನಮ್ಮ ಸರ್ಕಾರದ ಮೂಲಸೌಕರ್ಯ ಯೋಜನೆಗಳು ಮಧ್ಯಮ ವರ್ಗ, ರೈತರು, ಯುವಕರು ಮತ್ತು ಸಣ್ಣ ಉದ್ಯಮಿಗಳನ್ನು ತಲುಪುವ ಗುರಿ ಹೊಂದಿವೆ. ದೆಹಲಿ ಮತ್ತು ವಾರಾಣಸಿ ನಡುವಿನ ಬುಲೆಟ್ ಟ್ರೈನ್ ಟಿಕೆಟ್ ದರವನ್ನು ವಿಮಾನ ಪ್ರಯಾಣದ ದರಕ್ಕಿಂತಲೂ ಗಣನೀಯವಾಗಿ ಕಡಿಮೆಯಾಗಿಡಲಾಗುತ್ತದೆ. ಇದರಿಂದ ಸಾಮಾನ್ಯ ಪ್ರಯಾಣಿಕರಿಗೂ ಹೈಸ್ಪೀಡ್ ರೈಲು ಪ್ರಯಾಣ ಸುಲಭವಾಗಿ ಸಿಗಲಿದೆ" ಎಂದು ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ, ಅಕ್ಟೋಬರ್ 31: ಭಾರತದ ಅತ್ಯಾಧುನಿಕ ಹೈಸ್ಪೀಡ್ ರೈಲು ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಉತ್ತರ ಬುಲೆಟ್ ಟ್ರೈನ್ ಕಾರಿಡಾರ್’ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯಿಂದಾಗಿ ದೆಹಲಿ ಮತ್ತು ವಾರಾಣಸಿ ನಡುವಿನ ಪ್ರಯಾಣದ ಸಮಯ ಕೇವಲ ಮೂರೂವರೆ ಗಂಟೆಗಳಿಗೆ ಇಳಿಕೆಯಾಗಲಿದೆ.

ಈ ಯೋಜನೆಯು ಮುಂಬರುವ ದಶಕಗಳಲ್ಲಿ ಹಾಗೂ ಮುಂದಿನ ನೂರು ವರ್ಷಗಳ ಅವಧಿಗೆ ದೇಶದ ಸಾರಿಗೆ ಕ್ಷೇತ್ರಕ್ಕೆ ಭಾರಿ ಕೊಡುಗೆ ನೀಡಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಈ ಯೋಜನೆಯಿಂದಾಗಿ ದೆಹಲಿ- ವಾರಾಣಸಿ: 3 ಗಂಟೆ 33 ನಿಮಿಷಗಳು, ದೆಹಲಿ – ಕಾನ್ಪುರ: 1 ಗಂಟೆ 45 ನಿಮಿಷಗಳು, ದೆಹಲಿ – ಆಗ್ರಾ: ಕೇವಲ 59 ನಿಮಿಷಗಳು, ದೆಹಲಿ – ಲಕ್ನೋ: 2 ಗಂಟೆ 12 ನಿಮಿಷಗಳು, ವಾರಾಣಸಿ – ಲಕ್ನೋ: 1 ಗಂಟೆ 21 ನಿಮಿಷಗಳು, ವಾರಾಣಸಿ -ಪಾಟ್ನಾ: 1 ಗಂಟೆ, ವಾರಾಣಸಿ – ಪ್ರಯಾಗ್‌ರಾಜ್: ಕೇವಲ 33 ನಿಮಿಷಗಳು, ವಾರಾಣಸಿ – ಆಗ್ರಾ: 2 ಗಂಟೆ 34 ನಿಮಿಷಗಳಲ್ಲಿ ತಲುಪಬಹುದು.

“ಬುಲೆಟ್ ಟ್ರೈನ್ ಸೇವೆ ಕೇವಲ ಶ್ರೀಮಂತರಿಗಷ್ಟೇ ಸೀಮಿತ ಎಂಬ ತಪ್ಪು ಕಲ್ಪನೆಯನ್ನು ಕೆಲವರು ಹರಡಲು ಯತ್ನಿಸಬಹುದು. ಆದರೆ ನಮ್ಮ ಸರ್ಕಾರದ ಮೂಲಸೌಕರ್ಯ ಯೋಜನೆಗಳು ಮಧ್ಯಮ ವರ್ಗ, ರೈತರು, ಯುವಕರು ಮತ್ತು ಸಣ್ಣ ಉದ್ಯಮಿಗಳನ್ನು ತಲುಪುವ ಗುರಿ ಹೊಂದಿವೆ. ದೆಹಲಿ ಮತ್ತು ವಾರಾಣಸಿ ನಡುವಿನ ಬುಲೆಟ್ ಟ್ರೈನ್ ಟಿಕೆಟ್ ದರವನ್ನು ವಿಮಾನ ಪ್ರಯಾಣದ ದರಕ್ಕಿಂತಲೂ ಗಣನೀಯವಾಗಿ ಕಡಿಮೆಯಾಗಿಡಲಾಗುತ್ತದೆ. ಇದರಿಂದ ಸಾಮಾನ್ಯ ಪ್ರಯಾಣಿಕರಿಗೂ ಹೈಸ್ಪೀಡ್ ರೈಲು ಪ್ರಯಾಣ ಸುಲಭವಾಗಿ ಸಿಗಲಿದೆ” ಎಂದು ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More