ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಇಂದು ಬಿಹಾರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪಾಟ್ನಾದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದಾರೆ. ಬಿಹಾರ ಭೇಟಿಯ ಸಂದರ್ಭದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಅವರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಪಾಟ್ನಾ ವಿಮಾನ ನಿಲ್ದಾಣದ ಬಳಿಯ ಅರಣ್ಯ ಭವನದಲ್ಲಿ ರೋಡ್ ಶೋ ಪ್ರಾರಂಭವಾಯಿತು. ಪ್ರಧಾನಿಯವರ ಮೆರವಣಿಗೆ ಬೀದಿಗಳಲ್ಲಿ ಚಲಿಸುತ್ತಿದ್ದಂತೆ ಜನರು ಹೂವಿನ ದಳಗಳನ್ನು ಸುರಿಸಿ 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗಿದರು.
ಪಾಟ್ನಾ, ಮೇ 29: ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ 2 ದಿನಗಳ ಬಿಹಾರ ಭೇಟಿಯ ಮೊದಲ ದಿನವಾದ ಇಂದು ಪಾಟ್ನಾಗೆ ಆಗಮಿಸಿದ್ದಾರೆ. ಇಲ್ಲಿ ಅವರು ಬೃಹತ್ ರೋಡ್ ಶೋ (Road Show) ನಡೆಸಿದರು. ಪಾಟ್ನಾದಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರು. ಪ್ರಧಾನಿ ಮೋದಿ ಅವರನ್ನು ನೋಡಲು ಟೆರೇಸ್ಗಳ ಮೇಲೆ ಜನರು ಸೇರಿದ್ದರು. ಮೋದಿ ಅವರು ತಮ್ಮ ಕಾರಿನ ಒಳಗಿನಿಂದಲೇ ಜನಸಮೂಹಕ್ಕೆ ಕೈ ಬೀಸಿದರು. ಪಾಟ್ನಾ ವಿಮಾನ ನಿಲ್ದಾಣದ ಬಳಿಯ ಅರಣ್ಯ ಭವನದಲ್ಲಿ ರೋಡ್ ಶೋ ಪ್ರಾರಂಭವಾಯಿತು. ಪ್ರಧಾನಿಯವರ ಮೆರವಣಿಗೆ ಬೀದಿಗಳಲ್ಲಿ ಚಲಿಸುತ್ತಿದ್ದಂತೆ ಜನರು ಹೂವಿನ ದಳಗಳನ್ನು ಸುರಿಸಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: May 29, 2025 09:58 PM