PM Modi in Mangaluru: ಪ್ರಧಾನಿ ಮೋದಿ ಮಂಗಳೂರು ಭೇಟಿ; ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಏರ್ಪೋರ್ಟ್ನಿಂದ ಕುಳೂರು ಹೆಲಿಪ್ಯಾಡ್ನತ್ತ ಸೇನಾ ಹೆಲಿಕಾಪ್ಟರ್ನಲ್ಲಿ ಮೋದಿ ಹೊರಟರು. ಮಂಗಳೂರಿನ ಬಂಗ್ರಕೂಳೂರಿನಲ್ಲಿ ಬಿಜೆಪಿ ಬೃಹತ್ ಕಾರ್ಯಕ್ರಮ ಆಯೋಜಿಸಿದೆ.
ಮಂಗಳೂರು: ಕೇರಳದ ಕೊಚ್ಚಿನ್ನಲ್ಲಿ ದೇಶೀ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ಮೋದಿ ಅವರಿದ್ದ ವಿಮಾನವು ಬಜಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಏರ್ಪೋರ್ಟ್ನಿಂದ ಕುಳೂರು ಹೆಲಿಪ್ಯಾಡ್ನತ್ತ ಸೇನಾ ಹೆಲಿಕಾಪ್ಟರ್ನಲ್ಲಿ ಮೋದಿ ಹೊರಟರು. ಮಂಗಳೂರಿನ ಬಂಗ್ರಕೂಳೂರಿನಲ್ಲಿ ಬಿಜೆಪಿ ಬೃಹತ್ ಕಾರ್ಯಕ್ರಮ ಆಯೋಜಿಸಿದೆ. ಕೇಸರಿ ರುಮಾಲು ಧರಿಸಿರುವ ಮಹಿಳಾ ಬಿಜೆಪಿ ಕಾರ್ಯಕರ್ತೆಯರು ಮಿಂಚುತ್ತಿದ್ದಾರೆ. ಭರ್ತಿಯಾಗಿರುವ ಗೋಲ್ಡ್ ಫಿಂಚ್ ಸಿಟಿ ಮೈದಾನವು ಈಗಾಗಲೇ ಭರ್ತಿಯಾಗಿದೆ. ಮೈದಾನದತ್ತ ಇನ್ನೂ ಜನಸ್ತೋಮ ಹರಿದು ಬರುತ್ತಲೇ ಇದೆ. ಮೋದಿ ಸಮಾವೇಶಕ್ಕೆ ಪದ್ಮಶ್ರೀ ಹರೇಕಳ ಹಾಜಬ್ಬ ಸಹ ಬಂದಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲೆಂದು ಎನ್ಎಂಪಿಎ ಹೆಲಿಪ್ಯಾಡ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕಾಯುತ್ತಿದ್ದರು.
ಇದನ್ನೂ ಓದಿ: Narendra Modi: ಮಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ; ಜನಸ್ತೋಮದಿಂದ ಹರ್ಷೋದ್ಗಾರ
ಮೋದಿ ಊಟದ ಮೆನು ಹೀಗಿದೆ:
ನರೇಂದ್ರ ಮೋದಿ ಅವರಿಗಾಗಿ ಓಶಿಯನ್ ಪರ್ಲ್ ಹೋಟೆಲ್ನಿಂದ ಮಧ್ಯಾಹ್ನದ ಊಟ ತರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಮೆನು ಮೇಲೆ ಪ್ಯೂರ್ ವೆಜಿಟೇರಿಯನ್ ಎಂದು ನಮೂದಿಸಲಾಗಿದೆ. ಮಿಕ್ಸ್ ವೆಜಿಟೇಬಲ್ಸ್ ಸೂಪ್, ತವಾ ಮೇಡ್ ರೋಟಿ, ಪ್ಲೈನ್ ಮತ್ತು ಜೀರಾ ರೈಸ್, ದಾಲ್, ಎರಡು ಸಬ್ಜಿ, ಲೆಸ್ ಸ್ಪೈಸಿ ಮಸಾಲಾ (ಲೆಸ್ ಆಯಿಲ್), ಪ್ಲೈನ್ ಮೊಸರು, ನಿಂಬೆಹಣ್ಣು, ಮಿಕ್ಸಡ್ ಕಟ್ ಫ್ರೂಟ್ಸ್ ಮೆನುವಿನಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.