ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಮಮತಾ ಬ್ಯಾನರ್ಜಿ ಗೈರು

Updated on: Aug 22, 2025 | 6:53 PM

ಕೊಲ್ಕತ್ತಾ ನಗರ ಸಾರಿಗೆಗೆ ಮಹತ್ವದ ಸೇರ್ಪಡೆಯಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಹೊಸ ಕೊಲ್ಕತ್ತಾ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. ಹಸಿರು, ಕಿತ್ತಳೆ ಮತ್ತು ಹಳದಿ ಮಾರ್ಗಗಳ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.

ಕೊಲ್ಕತ್ತಾ, ಆಗಸ್ಟ್ 22: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳನ್ನು (Kolkata Metro)  ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಹಸಿರು, ಕಿತ್ತಳೆ ಮತ್ತು ಹಳದಿ ಮಾರ್ಗಗಳ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ (PM Narendra Modi) ಚಾಲನೆ ನೀಡಿದರು. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೊಸ ಕೋಲ್ಕತ್ತಾ ಮೆಟ್ರೋವನ್ನು ಉದ್ಘಾಟಿಸಿದಾಗ ನಗರದಾದ್ಯಂತ ಆ ಭರವಸೆಯನ್ನು ವೇಗವಾಗಿ, ತಡೆರಹಿತ ಪ್ರಯಾಣಕ್ಕೆ ವಿಸ್ತರಿಸುತ್ತದೆ. ಹೌರಾ ಮೈದಾನದಿಂದ ಸಾಲ್ಟ್ ಲೇಕ್ ಸೆಕ್ಟರ್ V ಗೆ ಸಂಪರ್ಕಿಸುವ ಹೊಸ ಹಸಿರು ಮಾರ್ಗ, ಬೆಲಿಯಾಘಾಟಕ್ಕೆ ಕಿತ್ತಳೆ ಮಾರ್ಗದ ವಿಸ್ತರಣೆ ಮತ್ತು ಜೈ ಹಿಂದ್ ಬಿಮನ್‌ಬಂದರ್ ವರೆಗಿನ ಹಳದಿ ಮಾರ್ಗದ ಮೊದಲ ಸೇವೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು.

ಮೆಟ್ರೋ ಉದ್ಘಾಟನೆಗೆ ಕೇಂದ್ರ ಸರ್ಕಾರದಿಂದ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸಿದ್ದರೂ ಸಹ ಅವರು ಭಾಗವಹಿಸಿಲ್ಲ. ತೃಣಮೂಲ ಕಾಂಗ್ರೆಸ್‌ನ ಮೂಲಗಳ ಪ್ರಕಾರ, ಅವರ ಈ ನಿರ್ಧಾರವು ಬಾಕಿ ಇರುವ ಕೇಂದ್ರ ನಿಧಿಗಳ ವಿರುದ್ಧ ಮತ್ತು ಕೇಂದ್ರ ಸರ್ಕಾರದ “ಮಲತಾಯಿ ಧೋರಣೆ” ವಿರುದ್ಧದ ಪ್ರತಿಭಟನೆಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ರೈಲ್ವೆ ಸಚಿವರಾಗಿದ್ದಾಗ ಈ ಯೋಜನೆಗಳನ್ನು ಘೋಷಿಸಿದ್ದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದರೊಂದಿಗೆ ಈ ಮೆಟ್ರೋ ಮಾರ್ಗಗಳ ಉದ್ಘಾಟನೆಯ ಕ್ರೆಡಿಟ್ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ