PM Modi Interview: ‘ದೇಶಕ್ಕೆ ಇಂತಹ ಮಾಧ್ಯಮ ಬೇಕು’: ಟಿವಿ9 ಡಿಜಿಟಲ್ ಹಾಡಿ ಹೊಗಳಿದ ಪ್ರಧಾನಿ ಮೋದಿ

|

Updated on: May 03, 2024 | 4:46 PM

‘ಪ್ರಧಾನಮಂತ್ರಿ ಮತ್ತು ಐವರು ಸಂಪಾದಕರು’ ಹೆಸರಿನ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಟಿವಿ9 ಸುದ್ದಿ ವಾಹಿನಿ ಮತ್ತು ಡಿಜಿಟಲ್​ ಮಾಧ್ಯಮವನ್ನು ಹಾಡಿ ಹೊಗಳಿದ್ದಾರೆ. ನಾನು ಬೇರೆ ದೇಶಕ್ಕೆ ತೆರಳಿದಾಗ ಮಾಹಿತಿಗಾಗಿ ನಿಮ್ಮ ಡಿಜಿಟಲ್ ಪ್ಲಾಟ್​ಫಾರ್ಮ್​​ಗೆ​ ಭೇಟಿ ನೀಡುತ್ತೇನೆ. ದೇಶಕ್ಕೆ ಹಾನಿ ಆಗುವಂತಹ ಯಾವುದೇ ಸುದ್ದಿಗಳನ್ನು ಟಿವಿ9 ಬಿತ್ತರಿಸಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ, ಮೇ.03: ದೇಶದ ಅತಿದೊಡ್ಡ ನ್ಯೂಸ್‌ ನೆಟ್‌ವರ್ಕ್‌ ಟಿವಿ9, ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಿನ್ನೆ ವಿನೂತನವಾದ ದುಂಡು ಮೇಜಿನ ಸಂದರ್ಶನ ನಡೆಸಿತು. ‘ಪ್ರಧಾನಮಂತ್ರಿ ಮತ್ತು ಐವರು ಸಂಪಾದಕರು’ (PM Modi Interview) ಹೆಸರಿನ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಮುಕ್ತ ಮಾತುಗಳನ್ನ ಆಡಿದ್ದಾರೆ. ಟಿವಿ9 ಸುದ್ದಿ ವಾಹಿನಿಯನ್ನು ಅವರು ಪ್ರಶಂಸಿಸಿದ್ದು, ಅದರಲ್ಲೂ ಟಿವಿ9 ಡಿಜಿಟ್​ಲ್​ ಅನ್ನು ಹಾಡಿ ಹೊಗಳಿದ್ದಾರೆ.  ‘ಟಿವಿ9 ಸುದ್ದಿ ವಾಹಿನಿಯ (TV9) ಎಲ್ಲಾ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ. ನಿಮ್ಮ ನೆಟ್​ವರ್ಕ್​ ಬಹಳ ದೊಡ್ಡದಿದ್ದು, ವೀಕ್ಷಕರ ಸಂಖ್ಯೆ ಕೂಡ ಜಾಸ್ತಿ ಇದೆ. ಅದೇ ರೀತಿಯಾಗಿ ನಿಮ್ಮ ಡಿಜಿಟಲ್​ ಮಾಧ್ಯಮ ಕೂಡ ಬಹಳ ದೊಡ್ಡದಿದೆ. ನಾನು ಬೇರೆ ದೇಶಕ್ಕೆ ತೆರಳಿದಾಗ ಮಾಹಿತಿಗಾಗಿ ನಿಮ್ಮ ಡಿಜಿಟಲ್ ಪ್ಲಾಟ್​ಫಾರ್ಮ್​​ಗೆ​ ಭೇಟಿ ನೀಡುತ್ತೇನೆ. ಅಲ್ಲಿ ಪ್ರಚಲಿತ ಮಾಹಿತಿ ಸಿಗುತ್ತದೆ. ಅದನ್ನು ನಾನು ಕೆಲವೊಮ್ಮೆ ಉಪಯೋಸಿಕೊಳ್ಳುತ್ತೇನೆ. ಇದುವರೆಗೂ ದೇಶಕ್ಕೆ ಹಾನಿ ಆಗುವಂತಹ ಯಾವುದೇ ಸುದ್ದಿಗಳನ್ನು ಟಿವಿ9 ಬಿತ್ತರಿಸಿಲ್ಲ. ಆ ಕುರಿಯಾಗಿ ನನ್ನ ಬಳಿಯೂ ದಾಖಲೆಗಳು ಇಲ್ಲ. ಆದ್ದರಿಂದ ಇಂತಹ ಸುದ್ದಿ ವಾಹಿನಿ ದೇಶಕ್ಕೆ ಅಗತ್ಯವಿದೆ. ಹಾಗಾಗಿ ಇಡೀ ನಿಮ್ಮ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 03, 2024 04:43 PM