ಚೆಸ್ ಒಲಿಂಪಿಯಾಡ್​ನಲ್ಲಿ ಚಿನ್ನ ಗೆದ್ದ ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ

|

Updated on: Sep 25, 2024 | 7:45 PM

PM Modi: ಚೆಸ್ ಒಲಿಂಪಿಯಾಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಚದುರಂಗದ ಚತುರರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಭಾರತದ ಪುರುಷ ಚೆಸ್ ತಂಡದ ಆಟಗಾರರು ಪ್ರಧಾನಿ ಸಮ್ಮುಖದಲ್ಲಿ ಚದುರಂಗ ಆಟವನ್ನೂ ಸಹ ಆಡಿದರು. ಆ ಬಳಿಕ ಎಲ್ಲಾ ಆಟಗಾರರೊಂದಿಗೆ ಮೋದಿ ಸಂವಾದ ನಡೆಸಿದರು.

ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಇತ್ತೀಚೆಗಷ್ಟೇ ನಡೆದಿದ್ದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವು ಮೊದಲ ಬಾರಿಗೆ ಮುಕ್ತ ವಿಭಾಗ (ಪುರುಷ ಮತ್ತು ಮಹಿಳೆ) ದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಚೆಸ್ ಒಲಿಂಪಿಯಾಡ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಎರಡೂ ವಿಭಾಗಗಳಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡ ಸಾಧನೆ ಮಾಡಿತ್ತು. ಇದೀಗ ಚೆಸ್ ಒಲಿಂಪಿಯಾಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಚದುರಂಗದ ಚತುರರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಭಾರತದ ಪುರುಷ ಚೆಸ್ ತಂಡದ ಆಟಗಾರರು ಪ್ರಧಾನಿ ಸಮ್ಮುಖದಲ್ಲಿ ಚದುರಂಗ ಆಟವನ್ನೂ ಸಹ ಆಡಿದರು. ಆ ಬಳಿಕ ಎಲ್ಲಾ ಆಟಗಾರರೊಂದಿಗೆ ಮೋದಿ ಸಂವಾದ ನಡೆಸಿದರು.

ಐತಿಹಾಸಿಕ ಸಾಧನೆ

ಮೇಲೆ ಹೇಳಿದಂತೆ 97 ವರ್ಷಗಳ ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದ ಸಾಧನೆ ಮಾಡಿದೆ. ಪುರುಷರ ತಂಡ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಸ್ಲೊವೇನಿಯಾ ತಂಡವನ್ನು 3.5- 0.5ರಿಂದ ಸೋಲಿಸಿದರೆ, ಮಹಿಳೆಯರ ತಂಡ ಅದೇ ಅಂತರದಿಂದ ಅಜರ್‌ಬೈಜಾನ್ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಡಿ.ಗುಕೇಶ್, ಅರ್ಜುನ್ ಎರಿಗೇಸಿ, ಆರ್.ಪ್ರಗ್ನಾನಂದ್, ವಿದಿತ್ ಗುಜರಾತಿ ಮತ್ತು ಪಿ.ಹರಿಕೃಷ್ಣ ಅವರಿದ್ದ ಪುರುಷರ ತಂಡ ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದು ಒಟ್ಟು 22ರಲ್ಲಿ 21 ಅಂಕ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದಲ್ಲದೆ ಚಿನ್ನದ ಪದಕ ಗೆದ್ದುಕೊಂಡಿತು. ಉಳಿದಂತೆ ಪುರುಷರ ವಿಭಾಗದಲ್ಲಿ ಅಮೆರಿಕ ಬೆಳ್ಳಿ ಹಾಗೂ ಉಜ್ಬೇಕಿಸ್ತಾನ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇನ್ನು ಡಿ ಹರಿಕಾ, ಆರ್ ವೈಶಾಲಿ, ದಿವ್ಯಾ ದೇಶಮುಖ್, ವಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್ ದೇವ್ ಅವರಿದ್ದ ಮಹಿಳಾ ತಂಡ 19 ಅಂಕ ಗಳಿಸಿ ಚಿನ್ನದ ಪದಕವನ್ನು ವಶಪಡಿಸಿಕೊಂಡಿತು. ಉಳಿದಂತೆ ಕಜಕಸ್ತಾನಕ್ಕೆ ಬೆಳ್ಳಿ ಪದಕ ಸಿಕ್ಕರೆ ಅಮೆರಿಕಕ್ಕೆ ಕಂಚಿನ ಪದಕ ಲಭಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on