ಇಂದೋರ್​ನಲ್ಲಿ ತಪ್ಪಿದ ಭಾರೀ ಅವಘಡ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ

ಇಂದೋರ್​ನಲ್ಲಿ ತಪ್ಪಿದ ಭಾರೀ ಅವಘಡ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ

ಸುಷ್ಮಾ ಚಕ್ರೆ
|

Updated on: Sep 25, 2024 | 9:11 PM

ಮಧ್ಯಪ್ರದೇಶದಲ್ಲಿ ಮಾಲ್ವಾ ಎಕ್ಸ್‌ಪ್ರೆಸ್‌ ರೈಲಿನ ಚಕ್ರದ ಘರ್ಷಣೆ ಉಂಟಾಗಿದ್ದು, ಇಂದೋರ್‌ನ ಬೋಗಿಯೊಂದರಲ್ಲಿ ಹೊಗೆ ಕಾಣಿಸಿಕೊಂಡಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಂದೋರ್​ನಲ್ಲಿ ಅಂಬೇಡ್ಕರ್ ನಗರದಿಂದ ವೈಷ್ಣೋದೇವಿಗೆ ಪ್ರಯಾಣಿಸುತ್ತಿದ್ದ ಇಂದೋರ್-ಮಾಲ್ವಾ ಎಕ್ಸ್‌ಪ್ರೆಸ್ ರೈಲಿನ ಬ್ರೇಕ್ ಫೇಲ್ಯೂರ್ ಆಗಿದೆ. ಇದರಿಂದಾಗಿ ಎಸಿ ಕೋಚ್ ಒಂದರ ಅಡಿಯಲ್ಲಿ ಕಿಡಿಗಳು ಮತ್ತು ಹೊಗೆ ಹೊರಹೊಮ್ಮಿತು. ರೈಲಿನಲ್ಲಿ ಹೊಗೆ ತುಂಬಿದ್ದರಿಂದ ಗಾಬರಿಗೊಂಡ ಪ್ರಯಾಣಿಕರು ಭಯಭೀತರಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ರೈಲಿನ ಬ್ರೇಕ್‌ಗಳು ಚಕ್ರಕ್ಕೆ ಸಿಲುಕಿದ್ದರಿಂದ ಹೊಗೆ ಮತ್ತು ಕಿಡಿಗಳು ಉಂಟಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ