ಮೈಸೂರಿಗೆ ಆಗಮಿಸುವ ಪ್ರಧಾನಿಗೆ ಬಿಜೆಪಿಯಿಂದ ರಾಮ, ಸೀತೆ ಮೂರ್ತಿ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಏ.13) ಮೈಸೂರಿಗೆ ಆಗಮಿಸಲಿದ್ದು, ಸಂಜೆ 4:30 ರಿಂದ 5:20ರವರೆಗೆ ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ. ಮೋದಿಯವರಿಗೆ ಮೈಸೂರು ಬಿಜೆಪಿ ಘಟಕ ವಿಶೇಷ ಉಡುಗೊರೆ ನೀಡಲು ಸಿದ್ದತೆ ಮಾಡಿಕೊಂಡಿದೆ.
ಮೈಸೂರು, ಏಪ್ರಿಲ್ 14: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಏ.13) ಮೈಸೂರಿಗೆ ಆಗಮಿಸಲಿದ್ದು, ಸಂಜೆ 4:30 ರಿಂದ 5:20ರವರೆಗೆ ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ. ಮೋದಿಯವರಿಗೆ ಮೈಸೂರು (Mysore) ಬಿಜೆಪಿ (BJP) ಘಟಕ ವಿಶೇಷ ಉಡುಗೊರೆ ನೀಡಲು ಸಿದ್ದತೆ ಮಾಡಿಕೊಂಡಿದೆ. ಮರದಲ್ಲಿ ಕೆತ್ತಿರುವ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಈ ಮೂರ್ತಿ ಸುಮಾರು ಎರಡು ಅಡಿ ಎತ್ತರ ಇದೆ. ಮೂರ್ತಿ ಜೊತೆಗೆ ಮೈಸೂರು ಪೇಟ, ರೇಷ್ಮೆ ಶಲ್ಯ, ಹಾರ ಹಾಕಿ ಸನ್ಮಾನಿಸಲಾಗುತ್ತದೆ. ರಾಮರಾಜ್ಯ ನಿರ್ಮಾಣದ ಕಲ್ಪನೆಯಲ್ಲಿರುವ ನರೇಂದ್ರ ಮೋದಿ ಅವರಿಗೆ ರಾಮನ ಮೂರ್ತಿ ನೀಡಿ ಗೌರವಿಸುತ್ತಿದ್ದೇವೆ. ಅವರು ಮೈಸೂರು ಭಾಗದಲ್ಲಿ ಪ್ರಚಾರ ಮಾಡುತ್ತಿರುವುದು ನಮಗೆ ಮತ್ತಷ್ಟು ಬೂಸ್ಟ್ ನೀಡಿದೆ. ಜನ ಈ ಬಾರಿಯೂ ಮತ್ತೊಮ್ಮೆ ಮೋದಿ ಎನ್ನುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಉಪಾಧ್ಯಕ್ಷ ರಾಜೇಂದ್ರ ಹೇಳಿದರು.