G20 Summit: ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ಮುಂದುವರಿಸಿದ ಇನ್​ಸ್ಪೆಕ್ಟರ್​​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ

|

Updated on: Sep 23, 2023 | 7:02 PM

ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇನ್​ಸ್ಪೆಕ್ಟರ್ ಅವರಲ್ಲಿ ಅನುಭವ ಹಂಚಿಕೊಳ್ಳಲು ಹೇಳಿದಾಗ ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ನಿರ್ವಹಿಸಿದ್ದನ್ನು ಹೇಳಿಕೊಂಡರು. ಇವರ ಕರ್ತವ್ಯ ನಿಷ್ಠೆಗೆ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಸೆ.23: ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ (G20 Summit 2023) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇನ್​ಸ್ಪೆಕ್ಟರ್ ಅವರಲ್ಲಿ ಅನುಭವ ಹಂಚಿಕೊಳ್ಳಲು ಹೇಳಿದಾಗ ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ನಿರ್ವಹಿಸಿದ್ದನ್ನು ಹೇಳಿಕೊಂಡರು. ಇವರ ಕರ್ತವ್ಯ ನಿಷ್ಠೆಗೆ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತ್ ಮಂಟಪದ ಮೀಟಿಂಗ್ ರೂಮ್​ನಲ್ಲಿ ಭದ್ರತಾ ನಿರ್ವಹಣೆ ಮಾಡಿದ ಇನ್​ಸ್ಪೆಕ್ಟರ್ ಸುರೇಶ್ ಕುಮಾರ್ ಅವರ ಬಳಿ ಅನುಭವ ಹಂಚಿಕೊಳ್ಳಲು ಮೋದಿ ಹೇಳಿದ್ದಾರೆ. ಈ ವೇಳೆ ಸುರೇಶ್, ಗರ್ವದಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಈ ಕಾರ್ಯಕ್ರಮ ಒಂದು ದೊಡ್ಡ ಅನುಭವ ಆಗಿದೆ. ಆದರೆ ಕರ್ತವ್ಯದಲ್ಲಿದ್ದಾಗ ನನ್ನ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ನಡುವೆ ತಾನು ಕರ್ತವ್ಯ ಮುಂದುವರಿಸಿದ್ದಾಗಿ ಹೇಳಿದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಗಟ್ಟಿ ಮನಸು ಮಾಡಿ ಕರ್ತವ್ಯದಲ್ಲಿ ತೊಡಗಿಕೊಂಡಿದ್ದೀರಿ. ದಃಖದ ನಡುವೆ ತಮ್ಮನ್ನು ತಾವು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೀರಿ. ಸುರೇಶ್​​ಜೀ ನಿಮಗೆ ಧನ್ಯವಾದಗಳು ಎಂದು ಮೋದಿ ಹೇಳಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on