Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ: ಮೋದಿ ಜತೆ ಜಿ-20 ಅನುಭವ ಹಂಚಿಕೊಂಡ NDMC ಅಧಿಕಾರಿ

ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ: ಮೋದಿ ಜತೆ ಜಿ-20 ಅನುಭವ ಹಂಚಿಕೊಂಡ NDMC ಅಧಿಕಾರಿ

ಅಕ್ಷಯ್​ ಪಲ್ಲಮಜಲು​​
|

Updated on: Sep 23, 2023 | 7:40 PM

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕರ್ತವ್ಯ ಸಲ್ಲಿಸಿದ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಂದು (ಸೆ.23) ಭಾರತ್ ಮಂಟಪಂನಲ್ಲಿ ಸಂವಾದ ನಡೆಸಿದರು. ಜಿ-20 ಶೃಂಗಸಭೆಯ ಯಶಸ್ಸಿನ ಮನ್ನಣೆಯನ್ನು ಅವರಿಗೆ ನೀಡಿದರು.

ದೆಹಲಿ, ಸೆ.23: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕರ್ತವ್ಯ ಸಲ್ಲಿಸಿದ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಂದು (ಸೆ.23) ಭಾರತ್ ಮಂಟಪಂನಲ್ಲಿ ಸಂವಾದ ನಡೆಸಿದರು. ಜಿ-20 ಶೃಂಗಸಭೆಯ ಯಶಸ್ಸಿನ ಮನ್ನಣೆಯನ್ನು ಅವರಿಗೆ ನೀಡಿದರು. ಜಿ20 ಶೃಂಗಸಭೆಯ ಯಶಸ್ಸಿನ ಶ್ರೇಯಸ್ಸು ನಿಮ್ಮೆಲ್ಲರಿಗೂ ಸಲ್ಲುತ್ತದೆ. ಭವಿಷ್ಯದ ಇಂತಹ ಕಾರ್ಯಕ್ರಮಗಳಿಗೆ ನಿಮ್ಮ ಸೇವೆ ಒಂದು ಮಾರ್ಗಸೂಚಿ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ 3,000 ಅಧಿಕಾರಿಗಳು ಭಾಗವಹಿಸಿದರು. ಇನ್ನು ಈ ಜಿ-20ಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳ ಅನುಭವವನ್ನು ಮೋದಿ ಕೇಳಿದರು. ಇದರಲ್ಲಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಅಧಿಕಾರಿ ಪ್ರವೀಣ್ ಕುಮಾರ್ ಎಂಬುವವರು​​ ಜಿ-20ಯಲ್ಲಿ ತಮ್ಮ ಅನುಭವದ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ನಮಸ್ಕಾರ ಸರ್​​ ನನ್ನ ಹೆಸರು ಪ್ರವೀಣ್ ಕುಮಾರ್, ಜಿ-20 ಯಶಸ್ವಿಯಾಗಿದೆ. ಈ ಸಭೆಗಾಗಿ ದೆಹಲಿ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ನಮ್ಮ NDMCಯಿಂದ ದೆಹಲಿಯ 40 ಕಡೆ ರಸ್ತೆ ಸುಂದರೀಕರಣ ಮಾಡುವ ಜವಾಬ್ದಾರಿಯನ್ನು ನಮ್ಮ ಇಲಾಖೆಗೆ ನೀಡಲಾಗಿತ್ತು. ನಾನು ಮತ್ತು ನನ್ನ ತಂಡ ರಾತ್ರಿ -ಹಗಲು ಎನ್ನದೇ ಕೆಲಸ ಮಾಡಿದ್ದೇವೆ. ಒಂದು ದಿನ ಎಲ್ಲ ಕೆಲಸ ಮುಗಿಸಿ ನಾನು ಮನೆಗೆ ಬರುವಾಗ ಮುಂಜಾನೆ 3.00 ಗಂಟೆಯಾಗಿತ್ತು. ಮನೆಯ ಬಾಗಿಲು ಬಡಿದಾಗ ನನಗೆ ಒಂದು ಕರೆ ಬರುತ್ತದೆ, ಯಾರೋ ಒಬ್ಬರು ನಾವು ಸುಂದರೀಕರಣ ಮಾಡಿದ ರಸ್ತೆಯನ್ನು ಅಪಘಾತ ಮಾಡಿ ಹಾಳು ಮಾಡಿದ್ದಾರೆ ಎಂದು ಹೇಳಿದರು. ತಕ್ಷಣ ನಾನು ಮನೆಯ ಒಳಗೆ ಹೋಗದೇ ವಾಪಸ್ಸು ಹೋಗಲು ಮುಂದಾದಾಗ ಅಮ್ಮ ಬಾಗಿಲು ತೆಗೆದು ಒಳಗೆ ಬಾ ಎಲ್ಲಿಗೆ ಹೋಗುತ್ತಿರುವೇ ಎಂದು ಕೇಳಿದ್ರು, ನಾನು ಅಮ್ಮನಿಗೆ ಎಲ್ಲ ವಿಷಯವನ್ನು ಹೇಳಿದೆ. ಅಮ್ಮ ಹೇಳಿದ್ರು ಹೋಗು ಮಗ ನಮ್ಮ ದೇಶಕ್ಕೆ ವಿದೇಶದಿಂದ ದೊಡ್ಡ ದೊಡ್ಡ ಗಣ್ಯರು ಬರುತ್ತಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಇದಕ್ಕೆ ಪ್ರಕ್ರಿಯೆ ನೀಡಿದ ಪ್ರಧಾನಿ ಒಳ್ಳೆಯ ಕೆಲಸ ಮಾಡಿದ್ದೀರಾ, ನಿಮ್ಮ ಅಮ್ಮನಿಗೂ ಗೊತ್ತಾಯಿತ್ತು ನೋಡಿ ನಿಮ್ಮ ಕೆಲಸ ಬಗ್ಗೆ ಎಂದು ಹೇಳಿದರು.