ಯುದ್ಧದ ಭೀತಿಯಲ್ಲಿ ಡೆಸ್ಪರೇಟ್ ಆಗಿರುವ ಪಾಕಿಸ್ತಾನ, ಪ್ರಧಾನಿ ಮೋದಿಯವರ ನಿರ್ಧಾರದಿಂದ ದಿಗಿಲು

Updated on: Apr 30, 2025 | 8:54 PM

ಯುದ್ಧದ ಕಾರ್ಮೋಡ ತನ್ನ ತಲೆಯ ಮೇಲೆ ಅಪಾಯಕಾರಿಯಾಗಿ ಓಲಾಡುತ್ತಿದ್ದರೂ ಪಾಕಿಸ್ತಾನದ ವಿವಿಧ ಪ್ರಾಂತ್ಯ ಮತ್ತು ಭಾಗಗಳಲ್ಲಿ ಒಗ್ಗಟ್ಟು, ಐಕ್ಯತೆಯ ಭಾವ ಕಾಣುತ್ತಿಲ್ಲ. ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ್ದು ಸಿಂಧ್ ಪ್ರಾಂತ್ಯವನ್ನು ತಳಮಳಕ್ಕೀಡು ಮಾಡಿ ಪ್ರದೇಶವನ್ನು ಪ್ರತ್ಯೇಕಗೊಳಿಸುವಂತೆ ಅಲ್ಲಿಯ ಜನ ಪ್ರದರ್ಶನ ನಡೆಸುತ್ತಿದ್ದಾರೆ. ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶದಲ್ಲಿ ಮೊದಲಿಂದಲೂ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ.

ಬೆಂಗಳೂರು, ಏಪ್ರಿಲ್ 30: ಭಾರತವು ಪಾಕಿಸ್ತಾನದ ಮೇಲೆ ಇನ್ನೆರಡು ದಿನಗಳಲ್ಲಿ ಅಕ್ರಮಣ ನಡೆಸಲಿದೆ ಎಂದು ಅಲ್ಲಿನ ಮಂತ್ರಿಯೊಬ್ಬರು (Pakistan minister) ರಾತ್ರೋರಾತ್ರಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಹೇಳಿರುವುದು ಆ ನೆರೆರಾಷ್ಟ್ರ ಎಷ್ಟು ಆತಂಕದಲ್ಲಿದೆ ಅನ್ನೋದನ್ನು ಸೂಚಿಸುತ್ತದೆ. ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲ ಮೂರು ಪಡೆಗಳ ಮುಖ್ಯಸ್ಥರೊಂದಿಗೆ ಸಭೆಯೊಂದನ್ನು ನಡೆಸಿ ಸೇನೆಯ ಕಾರ್ಯಾಚರಣೆ ಬಗ್ಗೆ ಕಾಲ್ ತೆಗೆದುಕೊಳ್ಳಲು ಅವರಿಗೆ ಅನುಮತಿ ನೀಡಿದ್ದು ಪಾಕಿಸ್ತಾನಿ ಸೇನಾಪಡೆಗಳಲ್ಲಿ ಇನ್ನಿಲ್ಲದ ಭುಗಿಲು, ದಿಗಿಲು ಹುಟ್ಟಿಸಿದೆ. ಹಾಗಾಗೇ, ಪಾಕಿಸ್ತಾನದ ಬೇರೆ ಬೇರೆ ಭಾಗಗಳಲ್ಲಿದ್ದ ಸೇನೆಯನ್ನು ಭಾರತದೊಂದಿಗೆ ಹಂಚಿಕೊಂಡಿರುವ ಗಡಿ ಪ್ರದೇಶದ ಕಡೆ ರವಾನಿಸುತ್ತಿದೆ.

ಇದನ್ನೂ ಓದಿ:  PM Modi cabinet panel meeting: ಪಹಲ್ಗಾಮ್ ಉಗ್ರ ದಾಳಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಂಪುಟ ಸಮಿತಿಗಳ ಸಭೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 30, 2025 08:52 PM